ರಾಯಚೂರು ಫೆಬ್ರವರಿ 3 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಫೆಬ್ರವರಿ 05ರಂದು ಮಧ್ಯಾಹ್ನ 4 ರಿಂದ 5.30ರವರೆಗೆ ನಡೆಯುವ ವಚನ, ದಲಿತ, ಬಂಡಾಯ ಸಾಹಿತ್ಯಗೋಷ್ಠಿಯನ್ನು ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಉದ್ಘಾಟಿಸುವರು.
ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಭಗತರಾಜ್ ನಿಜಾಮಕಾರಿ ಆಶಯ ನುಡಿಗಳನ್ನಾಡುವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿ.ಬಿ.ಚಿಲ್ಕರಾಗಿ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ.ಅಮರೇಶ ನುಗಡೋಣಿ, ಬಂಡಾಯ ಸಾಹಿತಿ ಸಿ ದಾನಪ್ಪ, ಸಿರವಾರ ತಾಲೂಕು ಕಸಾಪ ಅಧ್ಯಕ್ಷರಾದ ಮೌನೇಶ ಹಣಗಿ, ಮಸ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿದ್ಯಾವತಿ ವಣಕಿ ಉಪಸ್ಥಿತರಿರುವರು.
ರಾಯಚೂರು ಜಿಲ್ಲೆಯಲ್ಲಿ ವಚನ ಸಾಹಿತ್ಯ ಕುರಿತು ಲೇಖಕಿ ಡಾ.ಸರ್ವಮಂಗಳ ಸಕ್ರಿ ಅವರು ಉಪನ್ಯಾಸ ನೀಡುವರು. ರಾಯಚೂರು ಜಿಲ್ಲೆಯ ದಲಿತ ಸಾಹಿತ್ಯ ಕುರಿತು ಮಾನವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಜೆ.ಎಲ್.ಈರಣ್ಣ ಉಪನ್ಯಾಸ ನೀಡುವರು. ರಾಯಚೂರು ಜಿಲ್ಲೆಯ ಬಂಡಾಯ ಸಾಹಿತ್ಯ ಕುರಿತು ಸಾಹಿತಿ ಡಾ.ದಸ್ತಗೀರಸಾಬ ದಿನ್ನಿ ವಿಶೇಷ ಉಪನ್ಯಾಸ ನೀಡುವರು. ವೈ.ಕೆ.ಯಶೋಧ ನಿರೂಪಿಸುವರು. ರಾಜಾಶಂಕರ ಅವರು ಸ್ವಾಗತಿಸುವರು. ಡಾ.ಶಿವಲೀಲಾ ಬಸನಗೌಡ ವಂದಿಸುವರು.

Leave a Reply

Your email address will not be published. Required fields are marked *