ರಾಯಚೂರು ಫೆಬ್ರವರಿ 3 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಫೆಬ್ರವರಿ 05ರಂದು ರಾತ್ರಿ 9 ರಿಂದ ಉರ್ದು ಮುಷಾಯಿರಾ ಕಾರ್ಯಕ್ರಮ ನಡೆಯಲಿದೆ.
ಹಿರಿಯ ಉರ್ದು ಕವಿ ವಹೀದ್ ವಾಹೀದ್ ಅಧ್ಯಕ್ಷತೆ ವಹಿಸುವರು. ಕವಿ ಡಾ.ಇಫ್ತಿಕಾರ್ ಶಕೀಲ್ ನಿರ್ವಹಣೆ ಮಾಡುವರು. ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪುರಷ್ಕೃತರಾದ ಕವಿ, ಅನುವಾದಕ ಆರೀಫ್ ರಾಜಾ ಅಶಯನುಡಿಗಳನ್ನಾಡುವರು. ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಈರಣ್ಣ ಬಿರಾದಾರ ಹಾಗೂ ಹಿರಿಯ ಸಾಹಿತಿ ವೀರ ಹನುಮಾನ ಅವರು ಗೌರವ ಉಪಸ್ಥಿತಿ ವಹಿಸುವರು.
ಉರ್ದು ಕವಿಗಳಾದ ನುಸ್ರತ್ ಮೆಹದಿ, ಬೊಪಾಲ್, ಸರ್ದಾರ್ ಸಲೀಂ, ಹೈದ್ರಾಬಾದ್, ಮೆಹಕ್ ಕೆರಾನ್ವಿ, ಇರ್ಫಾನ್ ರಾಯಚೂರು, ಮಿಸ್ಕಿನ್ ರಾಯಚೂರು, ಜಿಶಾನ್ ಶಾದ್, ಹರ್ಷದ್ ನದೀಂ ದೆಹಲಿ, ಶಫೀಕ್ ಅಬಿದಿ, ಬೆಂಗಳೂರು, ಸುಂದರ್ ಮಾಲೆಗಾನ್ವಿ, ಅಖಿಲ್ ಯಾವರ್, ವಹಾಬ್ ಆಜಾದ್, ಶೋಯೇಬ್ ಮದ್ನಿ, ಜಾವಿದ್ ಫೆರೋಜಾಖಾದಿ, ಯು.ಪಿ., ಜಮೀಲ್ ಬನಾರಸಿ, ಯು.ಪಿ., ಡಾ.ಇಪ್ತಿಕಾರ್ ಶಕೀಲ್, ಇಂಡಿಯನ್ ಭಾಷಾ, ತಯ್ಯಬ್ ಖಾದ್ರಿ, ಜಹೀರುದ್ದೀನ್ ಅವರು ಈ ಉರ್ದು ಮುಷಾಯಿರಾ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
