ರಾಯಚೂರು ಫೆಬ್ರವರಿ 3 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಫೆಬ್ರವರಿ 05ರಂದು ಮಧ್ಯಾಹ್ನ 3ರಿಂದ 4 ಗಂಟೆವರೆಗೆ ಸಾಹಿತ್ಯ ಸಂಸ್ಕೃತಿ ಗೋಷ್ಠಿಯನ್ನು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಉದ್ಘಾಟಿಸುವರು.
ಹಿರಿಯ ಸಾಹಿತಿ ವೀರ ಹನುಮಾನ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ ಅಮರೇಶ ಬಿರಾದಾರ, ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರಾಜೇಂದ್ರ ಜಲ್ದಾರ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಸ್ಕಿ ನಾಗರಾಜ ಉಪಸ್ಥಿತರಿರುವರು.
ರಾಯಚೂರು ಜಿಲ್ಲೆಯ ಇತಿಹಾಸ ಕುರಿತು ಹಂಪಿ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾದ ಡಾ.ಅಮರೇಶ ಯತಗಲ್ ಅವರು ಉಪನ್ಯಾಸ ನೀಡುವರು. ರಾಯಚೂರು ಜಿಲ್ಲೆಯ ಸಾಹಿತ್ಯ ಹಿರಿಮೆ ಕುರಿತು ಹಿರಿಯ ಸಾಹಿತಿ ವೆಂಕಟರಾವ್ ಕುಲಕರ್ಣಿ ಉಪನ್ಯಾಸ ನೀಡುವರು. ರಾಯಚೂರು ಜಿಲ್ಲೆಯ ಮಕ್ಕಳ ಸಾಹಿತ್ಯ ಕುರಿತು ಹಿರಿಯ ಮಕ್ಕಳ ಸಾಹಿತಿ ಭಾರ್ಗವಿ ದೇಸಾಯಿ ಅವರು ಉಪನ್ಯಾಸ ನೀಡುವರು.
ದಂಡಪ್ಪ ಬಿದಾದಾರ ನಿರೂಪಿಸುವರು. ತಾಯಪ್ಪ ಬಿ ಹೊಸೂರ ಸ್ವಾಗತಿಸುವರು. ಮಹಾಂತೇಶ ಹೀರಾ ನಿರ್ವಹಣೆ ಮಾಡುವರು. ವಿಜಯಕುಮಾರ ವಂದಿಸುವರು.
