ರಾಯಚೂರು ಫೆಬ್ರವರಿ 3 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಫೆಬ್ರವರಿ 05ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ನಗರದ ಜಿಲ್ಲಾ ಕಾರಾಗೃಹ ಹತ್ತಿರದ ಮಹಿಳಾ ಸಮಾಜ ಆವರಣದಲ್ಲಿ ಕವಿಗೋಷ್ಠಿ ನಡೆಯಲಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರು ಉದ್ಘಾಟನೆ ನೆರವೇರಿಸುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಕವಿ ಅನುವಾದಕರಾದ ಚಿದಾನಂದ ಸಾಲಿ ಅವರು ಆಶಯ ನುಡಿಗಳನ್ನಾಡುವರು. ಲಿಂಗಸುಗೂರಿನ ಸಾಹಿತಿಗಳಾದ ಗಿರಿರಾಜ ಹೊಸಮನಿ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಈರಣ್ಣ ಬಿರಾದಾರ್, ಸಾಹಿತಿ ಬಿ.ಜಿ.ಹುಲಿ, ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಬಿ.ವಿಜಯ ರಾಜೇಂದ್ರ, ಸಿಂಧನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಚ್.ಎಫ್.ಮಸ್ಕಿ ಅವರು ಭಾಗಿಯಾಗಲಿದ್ದಾರೆ.
ಭಾಗವಹಿಸುವ ಕವಿಗಳು: ಪಂಪಾಪತಿ ಶಾಸ್ತಿç, ಮಲ್ಲಣ್ಣ ಹರವಾಳ, ಮಹಾದೇವ ಎಸ್. ಪಾಟೀಲ್, ಖಾನ್ ಸಾಬ್ ಮೋಮಿನ್, ಜೆ.ಎಂ.ಶರಣಯ್ಯ ಸ್ವಾಮಿ, ಡಾ.ಹುಸೇನಪ್ಪ ಅಮರಾಪುರ, ಡಾ.ಸತೀಶ್ ಕುಮಾರ್ ಎಸ್.,
ಅನಿಲರಾಜ್ ಜೆ., ಮಹಾಂತೇಶ ಹೀರಾ, ಬಶೀರ್ ಅಹ್ಮದ್ ಹೊಸಮನಿ, ಅಮರಗುಂಡಪ್ಪ ಹೂಗಾರ, ದೇವರಾಜ್ ಎಸ್. ಬಪ್ಪೂರ, ಚಂದ್ರಶೇಖರ ನಾಡಗೌಡ, ಚಿದಾನಂದ ಕರಿಗೂಳಿ, ದುರುಗಪ್ಪ ಗುಡದೂರು, ಎಸ್.ಎನ್.ಅಲೆಕ್ಸಾಂಡರ್, ಅಖೀಲ್ ಅಹ್ಮದ್ ಅನ್ಸಾರಿ, ಬಸವರಾಜ ಜಂಗಮರಹಳ್ಳಿ, ರುದ್ರಪ್ಪ ಎಸ್ ತಳವಾರ, ವೆಂಕಟೇಶ ಗುಡೂರ, ಮಹೇಶ ಹಿಂದಿ ಶಿಕ್ಷಕ, ಕಾಶಿನಾಥ ಬಳಿಗಾರ, ರಾಮಕೃಷ್ಣ ನಾಯಕ, ಮಲ್ಲಿಕಾರ್ಜುನ ನಾಯಕ, ಕೆ. ಸತ್ಯನಾರಾಯಣ, ಪಲುಗುಲ ನಾಗರಾಜ, ಡಾ.ವೆಂಕಟೇಶ ನವಲಿ, ರಾಮಣ್ಣ ಬೋಯೆರ್, ಡಾ.ಎಸ್.ಜಿ.ಪಾಟೀಲ, ಲಕ್ಷ್ಮಣ ಬಾರಿಕೇರ, ವೆಂಕಟೇಶ ಬುಕ್ಕನೂರು, ಎಂ.ರಾಮಚಂದ್ರರಾವ್, ಮುರಳೀಕೃಷ್ಣ, ದೇವೇಂದ್ರ ಹುಡಾ, ಮಹಾಂತೇಶ ಗವಿಗಟ್ಟ, ಡಾ. ಅಮರಾಪುರ ಹೆಚ್.ಡಬ್ಲ್ಯು, ಶ್ರೀಧರರಾವ್ ದೇಸಾಯಿ, ಎಸ್.ಶಿವಮೂರ್ತಿ, ಗೋಪಿನಾಥ ದೇಸಾಯಿ, ರಾಘವೇಂದ್ರ ಕವಿತಾಳ, ಪ್ರಸನ್ನ ಪಟವಾರಿ, ಮುರುಗೇಶ ಕುಂಬಾರ, ಡಾ.ಸುನೀಲ್ ಕುಮಾರ್ ಪರೀಟ್, ಡಾ.ಶಾಮಸುಂದರ ಪಟವಾರಿ, ಪಿ.ವೆಂಕಟೇಶ ಬಾಗಲವಾಡ, ಸಣ್ಣ ಯಲ್ಲಪ್ಪ, ಮಂಜುನಾಥ ಗುತ್ತೇದಾರ, ಸೂಗೂರೇಶ ಹಿರೇಮಠ, ರಾಘವೇಂದ್ರ ವಿ.ಹೆಚ್., ರಘುನಾಥರೆಡ್ಡಿ ಮನ್ನಲಾಪುರ, ಶಂಕರರಾವ್ ಉಭಾಳೆ, ಡಾ.ತಿಮ್ಮಯ್ಯ ಶೆಟ್ಟಿ ಇಲ್ಲೂರ, ದೇವನಪಲ್ಲಿ ಶ್ರೀನಿವಾಸ್, ಸಿದ್ದಣ್ಣ ನಿಲೋಗಿ, ಸಿದ್ಧಾರ್ಥ ವಲ್ಲಭ, ಮಹಾಂತಸ್ವಾಮಿ ಉಪ್ರಾಳ, ರಾಯಸ್ವಾಮಿ ಪೆದ್ದರಾಯ, ನೀಲಕಂಠಯ್ಯ ಮಳಿಮಠ ಗಲಗ, ಇಮಾಮುದ್ದೀನ್ ಮಾಡಗಿರಿ, ಕೆ.ಮಲ್ಲಿಕಾರ್ಜುನ ಕವಿತಾಳ, ಜಿ.ಶರಣ ಬಸವರಾಜ್, ಶರಣಪ್ಪ ಗಬ್ಬೂರು, ಅಮರಯ್ಯ ಘಂಟಿ, ಚಂದ್ರಶೇಖರ ಮದ್ಲಾಪುರ, ವೀರೇಶ್ ಗೋನವಾರ, ಭೀರಪ್ಪ ಶಂಭೋಜಿ, ಸಿ.ದಾನಪ್ಪ, ಶಕೀಲ್ ಉಸ್ತಾದ್, ಮಹಾದೇವ ಹಳ್ಳಿ, ಶಿವಪ್ಪ ಪಾಟೀಲ ಜಾನೇಕಲ್, ಮಂಜುನಾಥ ಸಾಹುಕಾರಮನಿ, ಆನಂದ ಶಿಲ್ಪಿ ಜಕ್ಕೂರ, ಸಿ.ಹನುಮಂತರಾಯ ಕವಿತಾ ವಾಚನ ಮಾಡುವರು.
ಕಾರ್ಯಕ್ರಮದ ನಿರೂಪಣೆ ಅಣ್ಣಪ್ಪ ಮೇಟಿಗೌಡ, ಸ್ವಾಗತ ರಾವುತ್‌ರಾವ್ ಬರೂರ, ವಂದನಾರ್ಪಣೆ ವಿಜಯಲಕ್ಷ್ಮಿ ಅಸ್ಕಿಹಾಳ ಹಾಗೂ ನಿರ್ವಹಣೆಯನ್ನು ನಾಗಪ್ಪ ಹೊರಪ್ಯಾಟಿ ಅವರು ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
