ರಾಯಚೂರು ಫೆಬ್ರವರಿ 03 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಫೆ.5ರಂದು ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ 11 ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಅಲ್ತಾಪ್ ರಂಗ ಮಿತ್ರ ರಾಯಚೂರು ಅವರಿಂದ ನಾಟಕ, ವಿ.ಎನ್. ಅಕ್ಕಿ ರಾಯಚೂರು ಅವರಿಂದ ಸಮುದಾಯ, ಪ್ರವೀಣ ರೆಡ್ಡಿ ಗುಂಜಹಳ್ಳಿ ಅವರಿಂದ ನಾಟಕ, ಲಕ್ಷ್ಮಣ ಮಂಡಲಗೇರಾ ರಾಯಚೂರು ಅವರಿಂದ ನಾಟಕ, ಹನುಮಂತಪ್ಪ ಜಾಲಿಬೆಂಚಿ ರಾಯಚೂರು ಅವರಿಂದ ನಾಟಕ, ಉರುಕುಂದಪ್ಪ ಅವರಿಂದ ರಂಗಭೂಮಿ, ಈರಣ್ಣ ಸೇನನಪಲ್ಲಿ ರಾಯಚೂರು ಅವರಿಂದ ನಾಟಕ, ಅಣವೀರಯ್ಯ ರಾಯಚೂರು ಅವರಿಂದ ನಾಟಕ, ರಂಗಸ್ವಾಮಿ ರಾಯಚೂರು ಅವರಿಂದ ಬಯಲಾಟ, ವೆಂಕಟ ನರಸಿಂಹಲು ರಾಯಚೂರು ಅವರಿಂದ ಪೌರಾಣಿಕ ನಾಟಕ, ರಂಗಚೇತನ ಸಾಂಸ್ಕೃತಿಕ ಕಲಾಸಂಘ ರಾಯಚೂರು ಅವರಿಂದ ನಾಟಕ, ದೇವಣ್ಣ ಎಲೆ ಬಿಚ್ಚಾಲಿ ಅವರಿಂದ ನಾಟಕ ನಡೆಯಲಿದೆ. ನಿರೂಪಣೆಯನ್ನು ವೈಶಂಪಾಯನ ಜೋಷಿ, ಪ್ರಸನ್ನ ಕುಮಾರ ರಾಯಚೂರು, ಶ್ರೀಕೃಷ್ಣ, ರಾಘವೇಂದ್ರ ರಾಯಚೂರು ಅವರು ನಡೆಸಿಕೊಡಲಿದ್ದಾರೆ.

Leave a Reply

Your email address will not be published. Required fields are marked *