ರಾಯಚೂರು ಫೆಬ್ರವರಿ 03 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಆಡಿಟೋರಿಯಂ ಸಭಾಂಗಣದಲ್ಲಿ ಬೆಳಗ್ಗೆ 11ರಿಂದ ಸಂಜೆ 7 ಗಂಟೆವರೆಗೆ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಈ ಸಭಾಂಗಣದಲ್ಲಿ ಬೂದಯ್ಯ ಯಾದಗಿರಿ ಅವರಿಂದ ಸುಗಮ ಸಂಗೀತ, ಯಂಕನಗೌಡ ದಿದ್ದಿಗಿ ಅವರಿಂದ ಭಕ್ತಿಗೀತೆ, ಅಲ್ಲಭಕ್ಷಿ ಸಿಂಧನೂರು ಅವರಿಂದ ಜನಪದ ಗಾಯನ, ಬಸವರಾಜ ದಿನ್ನಿ ಅವರಿಂದ ದಾಸರ ಪದಗಳು, ಚೈತ್ರಮ್ಮ ಮಾಟುರ ಅವರಿಂದ ಸಂಪ್ರದಾಯ ಪದಗಳು, ಜಯಸಿಂಹ ಪೇರೂರ ಅವರಿಂದ ಸಂಗೀತ ಗಾಯನ, ಸುಜಾತ ಜೋಷಿ ಅವರಿಂದ ದಾಸವಾಣಿ, ಶ್ರೀನಿವಾಸ ಸಿಗ್ನೆಚರ್ ಡ್ಯಾನ್ಸ್ ಗ್ರೂಪ್ ರಾಯಚೂರು ಅವರಿಂದ ಸಮೂಹ ನೃತ್ಯ, ಬಸಮ್ಮ ಜಾಲಿಹಾಳ ಅವರಿಂದ ಪಾರಿಜಾತ ಭಜನೆ, ಸಂಗೀತ, ಶರಣಮ್ಮ ಉಪಲದೊಡ್ಡಿ ಅವರಿಂದ ಸಂಪ್ರದಾಯ ಪದಗಳು, ಹನುಮಮ್ಮ ಬಸಪೂರ ಕೆ. ರಾಯಚೂರು ಅವರಿಂದ ಸೋಬಾನೆ ಪದಗಳು, ವಿಶ್ವನಾಥ ರಾಯಚೂರು ಅವರಿಂದ ಜನಪದ ಗೀತೆ, ನಟರಾಜ ರಾಯಚೂರು ಅವರಿಂದ ಸ್ಯಾಕ್ಟೋಪೋನ್, ದೇವರಾಜ ಡಿ. ಬೆಂಗಳೂರು ಅವರಿಂದ ಕಥಾ ಕೀರ್ಥನ, ಲಕ್ಷ್ಮಣ ಕೊಪ್ಪರ ಅವರಿಂದ ಭಕ್ತಿಗೀತೆ, ನರಸಿಂಹಲು ಮರ್ಚೆಡ್ ಅವರಿಂದ ಹಂತಿಪದಗಳು, ಅಕ್ಷಯ ಜೋಷಿ ಲಿಂಗಸೂಗೂರು ಅವರಿಂದ ತಬಲಾವಾದನ ಸೋಲೋ, ಪ್ರಭಾ ಕೆ. ಕಂಬಾರ ಅವರಿಂದ ಸುಗಮ ಸಂಗೀತ, ಅನ್ನಪೂರ್ಣಬಾಯಿ ರಾಯಚೂರು ಅವರಿಂದ ಭಕ್ತಿಗೀತೆಗಳು ನಡೆಯಲಿವೆ.

Leave a Reply

Your email address will not be published. Required fields are marked *