ರಾಯಚೂರು ಫೆಬ್ರವರಿ 03 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ವೇದಿಕೆ 2ರಲ್ಲಿ ಫೆ.5ರ ಬೆಳಗ್ಗೆ 11ರಿಂದ ಸಂಜೆ 5.30ರವರೆಗೆ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ.
ಬೆಳಿಗ್ಗೆ 11ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಶಶಿಧರ್ ಒಂದಲಿ ಅವರಿಂದ ವಚನ ಗಾಯನ, ಅಮರೇಶ ಸಾಲಿಮಠ ಅವರಿಂದ ಸುಗಮ ಸಂಗೀತ, ಶಾಂತಾ ಬಲ್ಲಟಗಿ ಅವರಿಂದ ಸುಗಮ ಸಂಗೀತ, ವಸುಂಧರ ವಿ, ಹೋಸಪೇಟೆ ಅವರಿಂದ ಭರತನಾಟ್ಯ, ರಮೇಶ ಹಸಮಕಲ್ ಅವರಿಂದ ಸುಗಮ ಸಂಗೀತ, ಮಲ್ಲಣ್ಣ ಹರವಾಳ ಅವರಿಂದ ಜಾನಪದ ಗಾಯನ, ಸಂಗನಗೌಡ ರಾಮತಾಳ ಅವರಿಂದ ಹಂತಿಪದಗಳು, ಜಾವೀದ್ ಅವರಿಂದ ಗಜಲ್, ಗುಲಾಮ್ ಹೈದಾರ್ ಅವರಿಂದ ಗಜಲ್, ಅನ್ವರಿ ಅವರಿಂದ ಕವಾಲಿ, ಸುಭಾಷ್ ಅಸ್ಕಿಹಾಳ ಅವರಿಂದ ತತ್ವಪದಗಳು ನಡೆಯಲಿವೆ.
