ಬಳ್ಳಾರಿ : ಫೆ 01 ಬಳ್ಳಾರಿಯ ಆರಾಧ್ಯದೈವ ಶ್ರೀಕೋಟೆ ಮಲ್ಲೇಶ್ವರ ಸ್ವಾಮಿಯ ರಥೋತ್ಸವವು ಭಾನುವಾರ ಸಂಜೆ ಭಕ್ತಿ – ಶ್ರದ್ಧೆಗಳಿಂದ ಭಕ್ತಾಧಿಗಳು ಮತ್ತು ಬಳ್ಳಾರಿ ನಗರ ನಿವಾಸಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಯಶಸ್ವಿಯಾಗಿ ನೆರವೇರಿತು.ರಥೋತ್ಸವದ ಅಂಗವಾಗಿ ಕೋಟೆ ಪ್ರದೇಶದಲ್ಲಿ ಇರುವ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ, ಈಶ್ವರನ ದರ್ಶನವನ್ನು ಪಡೆದರು. ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಅಲಂಕಾರ ಮತ್ತು ಭಕ್ತಿಯನ್ನು ಸಮರ್ಪಣೆ ಮಾಡಲಾಗಿತ್ತು.

ಬಳ್ಳಾರಿಯ ತೇರುಬೀದಿಯಲ್ಲಿ ಇರುವ ರಥೋತ್ಸವವನ್ನು ಅಲಂಕರಿಸಿ, ಬೆಳಗ್ಗೆ ಮಡಿತೇರನ್ನು ಎಳೆಯಲಾಗಿತ್ತು. ಸಂಜೆ ರಥೋತ್ಸವವನ್ನು ಆಚರಿಸಲಾಯಿತು.

Leave a Reply

Your email address will not be published. Required fields are marked *