ಎಲ್ಲರಿಗೂ ಒಳಿತಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದ ಸಚಿವ ಎನ್ ಎಸ್ ಬೋಸರಾಜು

ವಾಸವಿ ನಗರ ಬಡಾವಣೆಯಲ್ಲಿ ಶ್ರೀ ಉದ್ಭವ ಆಂಜನೇಯ ಸ್ವಾಮಿ ನೂತನ ಆಲಯ ಶಿಖರ ಪ್ರತಿಷ್ಠಾಪನೆ ಹಾಗೂ ನಾಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರ ನಾಯಕ ಅವರು ವಿಶೇಷ ಪೂಜೆ ಹವನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಡಿನ ಸಮಸ್ತ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿದರು.

ನಂತರ ಶ್ರೀ ಉದ್ಭವಮೂರ್ತಿ ಆಂಜನೇಯ ಸ್ವಾಮಿ ನೂತನ ಆಲಯ ಶಿಖರ ಪ್ರತಿಷ್ಠಾಪನ ಸಮಿತಿಯಿಂದ ಸಚಿವ ಎನ್ ಎಸ್ ಬೋಸರಾಜು ಹಾಗೂ ಸಂಸದ ಜಿ ಕುಮಾರ್ ನಾಯಕ ಅವರಿಗೆ ದೇವಸ್ಥಾನದ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ ಶಾಂತಪ್ಪ ಜಯವಂತರಾವ್ ಪತಂಗೆ, ಕಡಗೋಲ್ ಆಂಜನೇಯ್ಯ, ಜಿ ಶಿವಮೂರ್ತಿ ರುದ್ರಪ್ಪ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *