ತಾಳಿಕೋಟೆ: ತಾಲೂಕಿನ ಚಬನೂರ ಗ್ರಾಮದ ಸಿದ್ದೀಪುರುಷ ಶ್ರೀ ರಾಮಲಿಂಗೇಶ್ವರ ನೂತನ ಮಠ ಹಾಗೂ ಸಭಾಭವನದ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಪುರಾಣ ಕಾರ್ಯಕ್ರಮದಲ್ಲಿ ಶಳ್ಳಗಿ ಗ್ರಾಮದ ಜಂಗಮ ಸಮಾಜದಿಂದ ಜ್ಯೋತಿಷ್ಯ ರತ್ನ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳಿಗೆ ಅವರ ಆಧ್ಯಾತ್ಮಿಕ ಸೇವೆಗಾಗಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಕೊಡೆಕಲ್ಲದ ಪೂಜ್ಯ ಶಿವಕುಮಾರ ಶ್ರೀಗಳು, ನಾವದಗೀಯ ಷ.ಬ್ರ.ಶ್ರೀ ರಾಜಗುರು ರಾಜೇಂದ್ರ ಶಿವಾಚಾರ್ಯರು, ದೇವರ ಹಿಪ್ಪರಗಿ ಪರದೇಶಿ ಮಠದ ಶ್ರೀ ಶಿವಯೋಗಿ ಶಿವಾಚಾರ್ಯರು, ಗಣ್ಯರಾದ ಶರಣಯ್ಯ ಹಿರೇಮಠ, ಹೊಂಬೆಸ್ವಾಮಿ ಹಿರೇಮಠ,ಕಾಶಿರಾಯಗೌಡ ದೇಸಾಯಿ, ಪಂಚಾಕ್ಷರಿ ಹಿರೇಮಠ, ನಾಗಯ್ಯ ಮಠ, ಶರಣಗೌಡ ಪೊಲೀಸ್ ಪಾಟೀಲ (ಕರಿಭಾವಿ), ಡಾ.ಸೋಮಶೇಖರಯ್ಯ ಹಿರೇಮಠ(ಮಿಣಜಗಿ), ಮಲ್ಲಯ್ಯ ಹಿರೇಮಠ ಮತ್ತೀತರರು ಇದ್ದರು.

