ತಾಳಿಕೋಟಿ: ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇ ವಜೀರ ಸಮಾಜ ವಿಜಯಪುರ ಹಾಗೂ ತಾಳಿಕೋಟಿ ತಾಲೂಕ ಘಟಕದ ಸಹಯೋಗದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಂಡೇ ವಜೀರ ಸಮಾಜದ ವಿದ್ಯಾರ್ಥಿಗಳ ಹಾಗೂ ಸಾಧಕರ ಸನ್ಮಾನ ಸಮಾರಂಭ ಇಂದು ನಡೆಯಲಿದೆ. ಪಟ್ಟಣದ ಶ್ರೀ ಖಾಸ್ಗತೇಶ್ವರ ಸಭಾಭವನದಲ್ಲಿ ಮುಂಜಾನೆ 11 ಘಂಟೆಗೆ ನಡೆಯಲಿರುವ ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಹಿರೂರ ಶ್ರೀ ಅನ್ನದಾನೇಶ್ವರ ಹಿರೇಮಠದ ಷ.ಬ್ರ.ಶ್ರೀ ಜಯ ಗುರು ಸಿದ್ದೇಶ್ವರ ಮಹಾಸ್ವಾಮಿಗಳು, ಕಲಕೇರಿ ಗದ್ದಗಿಮಠದ ಷ.ಬ್ರ.ಶ್ರೀ ಗುರು ಮಡಿವಾಳೇಶ್ವರ ಶಿವಾಚಾರ್ಯರು, ತಾಳಿಕೋಟಿಯ ಶ್ರೀ ಸಿದ್ದಲಿಂಗ ದೇವರು, ಕರಿಭಂಟನಾಳದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸುವರು.ವೀ.ಲಿಂ.ಹಂ.ವ.ಸಮಾಜದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸುವರು.ವೀ.ಲಿಂ.ಹಂ.ಸ. ತಾಳಿಕೋಟಿ ತಾಲೂಕಾ ಅಧ್ಯಕ್ಷ ರಾಮನಗೌಡ ಸಂ.ಬಿರಾದಾರ(ಕರಭಂಟನಾಳ) ಇವರ ಗೌರವ ಉಪಸ್ಥಿತಿ ಇರುವುದು. ಮುದ್ದೇಬಿಹಾಳ ಶಾಸಕ,ಕೆ.ಎಸ್.ಡಿ.ಎಲ್. ಅಧ್ಯಕ್ಷ ಅಪ್ಪಾಜಿ ನಾಡಗೌಡ ಹಾಗೂ ದೇ.ಹಿ.ಶಾಸಕ ರಾಜುಗೌಡ ಪಾಟೀಲ ಸಮಾರಂಭ ಉದ್ಘಾಟಿಸುವರು.ಭಾ.ಜ.ಪ.ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಹಾಗೂ ಮಾಜಿ ಶಾಸಕ ಸೋಮನಗೌಡ ಎಸ್ ಪಾಟೀಲ(ಸಾಸನೂರ) ಕ್ಯಾಲೆಂಡರ್ ಬಿಡುಗಡೆ ಮಾಡುವರು.ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಅರ್ಪಿಸುವರು. ಮುಖ್ಯ ಅತಿಥಿಗಳಾಗಿ ಕಲಬುರಗಿ ಚಾ.ಸಂ.ಅ.ಪೀಠದ ಅಧ್ಯಕ್ಷ ಜಿ.ಎನ್.ಪಾಟೀಲ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ಈ.ರೇವಡಿ, ಸ.ರಾ.ಪ್ರ.ಕಾರ್ಯದರ್ಶಿ ಆರ್.ಎಸ್.ಪಾಟೀಲ(ಅಗಸಬಾಳ),ಹಂಡೇ ವಜೀರ ಸಮಾಜದ ಜಿಲ್ಲಾಧ್ಯಕ್ಷ ಸಂಗನಗೌಡ ಕರಭಂಟನಾಳ,ವೀ.ಲಿಂ.ಹಂ.ವ.ಸ. ಬಾಗಲಕೋಟ ಅಧ್ಯಕ್ಷ ವಿ.ಕೆ.ಪಾಟೀಲ,ವಿಡಿಸಿಸಿ ಬ್ಯಾಂಕ ನಿರ್ದೇಶಕ ಬಿ.ಎಸ್.ಪಾಟೀಲ (ಯಾಳಗಿ),ವೀ.ಲಿಂ.ಮ.ತಾ. ಅಧ್ಯಕ್ಷ ಎಚ್ಎಸ್ ಪಾಟೀಲ, ವೀ.ಲಿಂ.ಪಂ.ಸ. ಅಧ್ಯಕ್ಷ ಡಾ.ವಿ.ಎಸ್.ಕಾರ್ಚಿ,ವೀ.ವಿ.ಸಂ.ತಾ. ಅಧ್ಯಕ್ಷ ವಿ.ಸಿ.ಹಿರೇಮಠ,ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ ಆಗಮಿಸುವರು,ಕಲಬುರಗಿ ಸಂಶೊಧಕ ಡಾ.ಡಿ.ಎನ್.ಪಾಟೀಲ, ಧಾರವಾಡ ಸಂಶೋಧಕ ಎಸ್‌.ಸಿ.ಪಾಟೀಲ,ಸ.ನಿ.ಅ.ದಾ. ಡಾ.ಎಂ.ಎಂ.ಬೆಳಗಲ್ ಉಪನ್ಯಾಸ ನೀಡುವರು. ಹಂಡೇ ವಜೀರ ಸಮಾಜದ ಬೆಂಗಳೂರು ಗೌರವಾಧ್ಯಕ್ಷ ಎಸ್ ಆರ್ ದೇಸಾಯಿಗೌಡ್ರ, ಮಾಜಿ ರಾಜ್ಯಾಧ್ಯಕ್ಷ ಬಿಎಸ್ ಪಾಟೀಲ, ಉಪಾಧ್ಯಕ್ಷ ಎಸ್ ಜಿ ಪಾಟೀಲ,ಆರ್.ಬಿ. ಮ್ಯಾಗೇರಿ, ಶಂಕರ ಗೌಡ ರಾಯ್ಗೊಂಡ್, ಬಾಪುಗೌಡ ಬಿರಾದಾರ, ಎಸ್.ಜಿ.ಬಳವಾಟ,ಮಾಜಿ ಪ್ರಧಾನ ಸಂಗನಗೌಡ ಪಾಟೀಲ, ಗೌರವ ಅಧ್ಯಕ್ಷ ಕೆ ಎಸ್ ಗೌಡರ, ಮುದ್ದೇಬಿಹಾಳ ಅಧ್ಯಕ್ಷ ಎಂ.ಬಿ.ಬಿರಾದಾರ,ಬ.ಬಾಗೇವಾಡಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಇಂಡಿ ಅಧ್ಯಕ್ಷ ರಾಜಶೇಖರ ಪಾಟೀಲ ಹಾಗೂ ವಿಜಯಪುರ ಅಧ್ಯಕ್ಷ ಎಸ್ ಎಸ್ ಅವರಾದಿ ಹಾಗೂ ಹಂಡೇ ವಜೀರ ಸಮಾಜದ ಎಲ್ಲಾ ಪ್ರಮುಖರು ಉಪಸ್ಥಿತ ಇರುವವರು.

Leave a Reply

Your email address will not be published. Required fields are marked *