ತಾಳಿಕೋಟಿ: ಪಟ್ಟಣದಲ್ಲಿ ರಜಪೂತ ಸಮಾಜದ ವತಿಯಿಂದ ಪ್ರತಿಷ್ಠಾಪನೆಗೊಂಡಿರುವ ಮಹಾರಾಣಾ ಪ್ರತಾಪ್ ಸಿಂಹ ಅವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಗ್ರಾಹಕ ವ್ಯವಹಾರಗಳು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ ಇವರಿಗೆ ಶುಕ್ರವಾರ ಆಮಂತ್ರಣ ನೀಡಲಾಯಿತು. ಬಿಜೆಪಿ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಆರ್ ಎಸ್ ಪಾಟೀಲ ಕೂಚಬಾಳ ಅವರ ನೇತೃತ್ವದ ಸ್ಥಳೀಯ ರಜಪೂತ ಸಮಾಜದ ನಿಯೋಗವು ಕೇಂದ್ರ ಸಚಿವ ಜೋಶಿ ಅವರ ಹುಬ್ಬಳ್ಳಿಯ ಗೃಹದಲ್ಲಿ ಭೇಟಿ ಮಾಡಿ ಅವರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿ ಅವರ ಜೊತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಜಿ ಕೇಂದ್ರ ಸಚಿವ ಅನುರಾಗ ಠಾಕೂರ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನೂ ಕರೆ ತರಲು ವಿನಂತಿಸಿಕೊಂಡರು. ನಿಯೋಗದ ವಿನಂತಿಗೆ ಸ್ಪಂದಿಸಿ ಮಾತನಾಡಿದ ಕೇಂದ್ರ ಸಚಿವ ಜೋಶಿ ಅವರು ಇವರೆಲ್ಲರಿಗೂ ಆಮಂತ್ರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು. ರಾಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ,ಉಪಾಧ್ಯಕ ರತನಸಿಂಗ್ ಕೊಕಟನೂರ,ಪ್ರಕಾಶ ಹಜೇರಿ,ಭರತ ವಿಜಾಪುರ, ಜೆ.ಎಸ್.ಜಿ.ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ಜೈಸಿಂಗ್ ಮೂಲಿಮನಿ, ಸುರೇಶ ಹಜೇರಿ,ಸಿರಸಕುಮಾರ ಹಜೇರಿ, ಪ್ರಭು ರಾಮನಗೌಡ, ಪ್ರಲ್ಹಾದ ಹಜೇರಿ,ವಿಠಲಸಿಂಗ್ ಹಜೇರಿ, ರವಿ ಕಟ್ಟಿಮನಿ, ವಿಠಲಸಿಂಗ್ ಬೆಕಿನಾಳ, ಕುಮಾರ ಹಜೇರಿ, ಅರುಣ ದಡೇದ ಮತ್ತೀತರರು ಇದ್ದರು.

Leave a Reply

Your email address will not be published. Required fields are marked *