ಲಿಂಗಸಗೂರು : ಫೆ 1
ದೇಶವನ್ನು ವೈಭವದತ್ತ ನಡೆಸುವ ಜವಬ್ದಾರಿ ಹಿಂದುಗಳ ಮೇಲಿದೆ ಎಂದು ಧರ್ಮ ಜಾಗರಣಾ ಮಂಚ್‌ನ ಪ್ರಾಂತ ಪ್ರಚಾರಕ ದತ್ತಾತ್ರೇಯ ನಾಯಕ ಹೇಳಿದರು.
ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನ ಮುಂಭಾಗದಲ್ಲಿ ಹಿಂದು ಸಮ್ಮೇಳನ ಸಮಿತಿಯಿಂದ ಆಯೋಜಿಸಿದ್ದ ಹಿಂದು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಸೃಷ್ಟಿಯು ಹುಟ್ಟಿದಾಗಿನಿಂದ ಸನಾತನ ಹಿಂದು ಧರ್ಮ ಮತ್ತು ಸಂಸ್ಕೃತಿ ಹುಟ್ಟಿಕೊಂಡಿದೆ. ಈ ಸೃಷ್ಟಿ ಇರುವವರೆಗೆ ಯಾರಿಂದಲೂ ಸನಾತನ ಧರ್ಮ ಅಳಿಸಲು ಸಾಧ್ಯವಿಲ್ಲ. ಹಿಂದು ಧರ್ಮ ಹೊರತುಪಡಿಸಿ ಎಲ್ಲವೂ ಮತಗಳಾಗಿವೆ. ಯಹೂದಿ, ಇಸ್ಲಾಂ, ಕ್ರೈಸ್ತ ಈ ಮೂರು ಮತಗಳು ಒಂದೇ ಸ್ಥಳದಲ್ಲಿ ಹುಟ್ಟಿವೆ. ಸೇವೆಯ ಮುಖವಾಡ ಧರಿಸಿ ತಮ್ಮ ಮತ ಹೇರಲು ಜಗತ್ತಿನ ಅನೇಕ ನಾಗರಿಕತೆಗಳನ್ನು ಮುಚ್ಚಿ ಹಾಕಿದರೂ ಭಾರತಕ್ಕೆ ಬಂದು ಆರು ನೂರು ವರ್ಷಗಳ ಕಾಲ ಆಳ್ವಿಕೆ ನಡೆಸಿದರೂ ಇಲ್ಲಿನ ನಾಗರಿಕತೆ, ಸಂಸ್ಕೃತಿ ಮುಚ್ಚಿಹಾಕಲು ಸಾಧ್ಯವಾಗಲಿಲ್ಲ . ನಮ್ಮ ಪೂರ್ವಜರು ಎದೆಕೊಟ್ಟು ನಿಂತಿದ್ದಕ್ಕೆ ನಾವುಗಳು ಈಗಲೂ ಸುರಕ್ಷಿತರಾಗಿದ್ದೇವೆ. ಹಿಂದು ಧರ್ಮ ಕ್ಷಿಣಿಸುತ್ತಿರುವ ವೇಳೆ ಕಾಲಾನುಸಾರ ಒಬಬ್ಬ ಮಹಾನ್ ವ್ಯಕ್ತಿ ಹುಟ್ಟಿ ಬಂದು ಹಿಂದು ಧರ್ಮ ರಕ್ಷಣೆ ಮಾಡಿದ್ದಾನೆ. ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಯಿಂದ ಹಿಂದು ಧರ್ಮಕ್ಕೆ ಜೀವಕಳೆ ಬಂದಿದೆ . ಛತ್ರಪತಿ ಶಿವಾಜಿ ಮಹಾರಾಜರು, ಅವರ ಮಗ ಸಂಭಾಜಿ ಮಹಾರಾಜರು ಹಿಂದು ಸ್ವರಾಜ್ಯವನ್ನೇ ಸ್ಥಾಪಿಸಿದರು. ಶಿವಾಜಿ ಮಹಾರಾಜರು ಹುಟ್ಟದಿದ್ದರೆ ಇಡೀ ದೇಶ ಇಸ್ಲಾಮಿ ಕರಣವಾಗುತ್ತಿತ್ತು. ಅದೇರೀತಿ ಮಹಾರಾಣಾ ಪ್ರತಾಪಸಿಂಹರು, ಗುರುಗೋವಿಂದರು,
ತೇಜಬಹಾದ್ದೂರರು ಸೇರಿದಂತೆ ಅನೇಕ ರಾಜ ಮಹಾರಾಜರು ಹಿಂದು ಧರ್ಮ ಉಳಿಸಿ ಬೆಳೆಸುವಲ್ಲಿ ತ್ಯಾಗ ಬಲಿದಾನ ಮಾಡಿದ್ದಾರೆ. ಸ್ವಾಮಿವಿವೇಕಾನಂದರು ಜಗತ್ತಿನಾದ್ಯಂತ ಹಿಂದು ಧರ್ಮ ಮತ್ತು ಹಿಂದುತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಆಗಸ್ಟ್ 15 ರಂದು ಅಧಿಕಾರ ಹಸ್ತಾಂತರವಾಯಿತೇ ಹೊರತು ನಿಜವಾದ ಸ್ವಾತಂತ್ರ್ಯ ದೊರೆತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕವೂ ಹಿಂದುಗಳ ರಕ್ಷಣೆಗೆ ಗಮನ ಹರಿಸುತ್ತಿಲ್ಲ. ಸೌರಾಷ್ಟ್ರದ ಸೋಮನಾಥ ದೇವಸ್ಥಾನ ಜೀರ್ಣೋದ್ಧಾರಕ್ಕೆ ವಿರೋಧ ವ್ಯಕ್ತಪಡಿಸಲಾಯಿತು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಿಸಲು 500 ವರ್ಷಗಳ ಕಾಲ ಹೋರಟ ಮಾಡಬೇಕಾಯಿತು. ಇಂದು ಶ್ರೀರಾಮ ಮಂದಿರ ನಿರ್ಮಾಣದ ಬಳಿಕ ಜಗತ್ತಿನಾದ್ಯಂತ ಹಿಂದುಗಳು ಆರ್ಥಿಕ ಶಕ್ತಿಯಾಗಿ ಪರಿವರ್ತನೆ ಗೊಂಡಿದೆ. ಕರೋನಾ ವೇಳೆ ಹಿಂದುಗಳು ಜಗತ್ತಿನ ಬಹುತೇಕ ರಾಷ್ಟ್ರಗಳಿಗೂ ಲಸಿಕೆ ನೀಡಿ ಜೀವ ಉಳಿಸಿದ್ದಾರೆ. ಹಿಂದುಗಳು ಎದ್ದಾಗಲೆಲ್ಲ ಕಲ್ಯಾಣ ಕಾರ್ಯಗಳು ನಡೆದಿವೆ.
ಹಿಂದುಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಘದ ಶತಾಬ್ಬಿ ವರ್ಷ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಕುಟುಂಬ, ಪರ್ಯಾವರ್ಣ, ಸಾಮಾಜಿಕ ಸಾಮರಸ್ಯ, ನಾಗರಿಕ ಜವಬ್ದಾರಿ ಮತ್ತು ಸ್ವದೇಶಿ ಎಂಬ ಪಂಚ ಪರಿವರ್ತನ ಸಂಕಲ್ಪ ಅಭಿಯಾನ ನಡೆಸಲಾಗುತ್ತಿದೆ. ಹೀಗಾಗಿ ಹಿಂದುಗಳು ದೇಶವನ್ನು ವೈಭವದತ್ತ ನಡೆಸುವ ಸಂಕಲ್ಪತೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾವೇಶದ ಸಾನಿದ್ಯವನ್ನು ಶ್ರೀ ವಿಜಯ ಮಹಾಂತೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ಹವಾ ಮಲ್ಲಿನಾಥ್ ಮಠದ ಮಹಾದೇವ ಸ್ವಾಮೀಜಿ, ಮಾತಾ ಮಾಣಿಕೇಶ್ವರಿ ಮಠದ ನಂದಿಕೇಶ್ವರಿ ಮಾತಾ. ಪ್ರಮುಖರಾದ ಎಂ.ಎಸ್.ಪಾಟೀಲ್, ಸುಮಂತ ಕನಕಗಿರಿ, ಶೋಭಾ ಕಾಟವಾ ಸೇರಿದಂತೆ ಇದ್ದರು.

