ರಾಯಚೂರು ಜನವರಿ 31 (ಕರ್ನಾಟಕ ವಾರ್ತೆ): ಮಾಹಿತಿ ನೀಡಲು ನಿರ್ಲಕ್ಷ್ಯ ಮಾಡಿದ್ದಕ್ಕೆ ಮೂರು ಜನ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಿಂದ ದಂಡ ವಿಧಿಸಿ ಆದೇಶ ಮಾಡಲಾಗಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ.ವೆಂಕಟ್ ಸಿಂಗ್ ಅವರು ಹೇಳಿದರು.
ಕಲಬುರಗಿಯ ತಮ್ಮ ಪೀಠದ ಕಚೇರಿಯಲ್ಲಿ ಜನವರಿ 31ರಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗುರುಮೂರ್ತಿ ಎನ್ನುವರು 17.11.2022 ರಂದು ಮಾಹಿತಿ ಕೋರಿ ಸಲ್ಲಿಸಿದ 6(1) ಅರ್ಜಿಗೆ ಮಾಹಿತಿ ನೀಡದ ಕಾರಣ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮ ಪಂಚಾಯತ ಅಧಿಕಾರಿ ನಾಗಭೂಷಣ ಅವರಿಗೆ 25,000 ರೂ. ದಂಡ ವಿಧಿಸಿ 23.01.2026 ರಂದು ಆದೇಶ ಮಾಡಲಾಗಿದೆ ಎಂದು ತಿಳಿಸಿದರು.
ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗವು, 15ನೇ ಹಣಕಾಸು ಆಯೋಗದ ಕುರಿತು ಕೋರಿದ ಮಾಹಿತಿ ನೀಡಬೇಕು ಎಂದು 06.10.2025 ರಂದು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಎಚ್ಚರಿಕೆ ಆದೇಶ ನೀಡಲಾಗಿತ್ತು. ಆದರೂ ಅವರು ಮಾಹಿತಿ ನೀಡಲು ನಿರ್ಲಕ್ಷ ತೋರಿದ್ದರಿಂದಾಗಿ 25,000 ರೂ. ಸಾವಿರ ದಂದ ವಿಧಿಸಲಾಗಿದೆ ಎಂದರು.
ಜಲಾಲ ಎನ್ನುವರು ಸಹ 15ನೇ ಹಣಕಾಸು ಆಯೋಗದ ಅನುದಾನ ಕುರಿತು ಸುಂಕೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗಭೂಷಣ ಅವರಿಗೆ 25.10.2023 ರಂದು 6(1) ರಡಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮಾಹಿತಿ ಸಿಗದ ಅರ್ಜಿದಾರರು 19(3) ಆಯೋಗಕ್ಕೆ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ದಿನಾಂಕ 25.10.2023 ರಂದು ನಡೆಸಿ, ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ಕರ್ನಾಟಕ ಮಾಹಿತಿ ಕಾಯ್ದೆ 2005ರ 20(1) ರನ್ವಯ ಎಚ್ಚರಿಕೆ ನೋಟಿಸ್ ನೀಡಲಾಗಿತ್ತು. ಆದಾಗ್ಯೂ ಪಿ.ಡಿ.ಓ. ನಾಗಭೂಷಣ ಅವರು ಮಾಹಿತಿ ನೀಡದ ಕಾರಣ ಈ ಪ್ರಕರಣದ ಬಗ್ಗೆ ದಿನಾಂಕ: 23.01.2026 ರಂದು ವಿಚಾರಣೆ ನಡೆಸಿದಾಗ ಅವರು ವಿಚಾರಣೆ ಗೈರು ಆಗಿ ಮಾಹಿತಿ ನೀಡದ ಕಾರಣ ಅವರಿಗೆ ರೂ.25.000 ದಂಡ ವಿಧಿಸಿ ಆದೇಶ ಮಾಡಲಾಗಿದೆ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಅಡಕಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಭಗವಂತರಾಯ ಮರಡಿ ಅವರಿಗೆ ಸಹ ರೂ.15,000 ರೂ. ದಂಢ ವಿಧಿಸಲಾಗಿದೆ. ರವಿ ಮದನಕರ್ ಎನ್ನುವರು 15ನೇ ಹಣಕಾಸು ಆಯೋಗದ ಅನುದಾನಕ್ಕೆ ಸಂಬAಧಿಸಿದAತೆ ಮಾಹಿತಿ ಕೋರಿ ದಿನಾಂಕ:07.08.2023 ರಂದು ಅರ್ಜಿ ಸಲ್ಲಿಸಿದ್ದರು. ಈ ಮಾಹಿತಿ ನೀಡದ ಕಾರಣ ಈ ಪ್ರಕರಣದಲ್ಲಿ ಸಲ್ಲಿಕೆಯದ ಮೇಲ್ಮನವಿ ಆಧಾರದ ಮೇಲೆ ದಿನಾಂಕ:15.09.2025ರAದು ವಿಚಾರಣೆ ನಡೆಸಿ ದಂಡ ವಿಧಿಸುವ ಕುರಿತು ಭಗವಂತರಾಯ ಮರಡಿ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರು ಅರ್ಜಿದಾರರಿಗೆ ಮಾಹಿತಿ ನೀಡಿದ ಕಾರಣ ದಿನಾಂಕ:23.01.2026 ರಂದು ವಿಚಾರಣೆ ವೇಳ ಪಿ.ಡಿ.ಓ ಭಗವಂತರಾಯ ಮರಡಿ ಗೈರು ಹಾಜರಾಗಿ ಮಾಹಿತಿ ನೀಡದ ಕಾರಣ ರೂ. 15,000 ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ನವೆಂಬರ್ 2025ರಿಂದ ವಿಚಾರಣೆ ಆರಂಭಿಸಿ 2010 ರಿಂದ 2022ರವರೆಗಿನ 357 ಪ್ರಕರಣಗಳನ್ನು ವಿಚಾರಣೆ ನಡೆಸಿ ಈ ಪೈಕಿ 282 ವಿಲೇವಾರಿ ಮಾಡಲಾಗಿದೆ. 2023ರಿಂದ ದಾಖಲಾದ ಪ್ರಕರಣಗಳನ್ನು 2026ರ ಜನವರಿಯಿಂದ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
2025ರ ನವೆಂಬರ್ 24 ರಿಂದ 2026ರ ಜನವರಿ 30ರವರೆಗೆ 992 ಪ್ರಕರಣಗಳ ವಿಚಾರಣೆ ನಡೆಸಿ ಈ ಪೈಕಿ 400 ಪ್ರಕರಗಳನ್ನು ವಿಲೇವಾರಿ ಮಾಡಲಾಗಿದೆ. ಈಗಾಗಲೇ ಮುಂಚಿನ ಆಯುಕ್ತರು ವಿಚಾರಣೆ ನಡೆಸಿದ ಬಾಕಿ ಹಳೆಯ ಪ್ರಕರಣಗಳು 882 ಇದ್ದು ಬರುವ ಮಾರ್ಚ ತಿಂಗಳಲ್ಲಿ ಈ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.
ಕಲಬುರಗಿ ಪೀಠದಲ್ಲಿ 19(3) ಅರ್ಜಿ ಸ್ವೀಕಾರ: ಈ ಮೊದಲು ಬೆಂಗಳೂರಿನಲ್ಲಿ ಮಾಹಿತಿ ಹಕ್ಕು ಕಾಯಿದೆಯಡಿ 19(3)ರಡಿ ಮೇಲ್ಮನವಿ ಅರ್ಜಿಗಳನ್ನು ಪಡೆಯಲಾಗುತ್ತಿತ್ತು. ಆದರೆ, ಈಗ ಮಾಹಿತಿ ಹಕ್ಕು 19(3) ರಡಿ ಮೇಲ್ಮನವಿ ಅರ್ಜಿಗಳನ್ನು ಕಲಬುರಗಿ ಪೀಠದಲ್ಲಿ ಪಡೆದು ಪರಿಶೀಲನೆ ಮಾಡಿ 2026ರ ಫೆಬ್ರವರಿಯಿಂದ ವಿಚಾರಣೆ ಕೈಗೊಳ್ಳಲಾಗುತ್ತದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯಗಾರ: ಮಾಹಿತಿ ಹಕ್ಕು ಕಾಯಿದೆ ಕಾರ್ಯಾಗಾರವು ಈಗಾಗಲೇ ಬೀದರ ಮತ್ತು ಬಳ್ಳಾರಿಯಲ್ಲಿ ಮುಗಿದಿದ್ದು, ಫೆಬ್ರವರಿ ಮಾಹೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಿಗದಿಮಾಡಿದೆ. ಪ್ರಸ್ತುತ ಕಲಬುರಗಿ ಪೀಠದಲ್ಲಿ 6691 ಪ್ರಕರಣಗಳು ಬಾಕಿ ಇದ್ದು, ತ್ವರಿತ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ದಂಡ ವಸೂಲಿ: ಸದ್ಯ ಬಾಗಲಕೋಟೆಯಲ್ಲಿರುವ ಈ ಹಿಂದೆ ಕೊಪ್ಪಳ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ರಾಜಕುಮಾರ ಯರಗಲ್ ಅವರಿಂದ 10 ಸಾವಿರ ರೂ. ದಂಡ, ಅದೇ ರೀತಿ ರಾಯಚೂರಿನ ಯರಮರಸ್ ಡಯಟನ್‌ನ ಹಿರಿಯ ಉಪನ್ಯಾಸಕರಾದ ಮಲ್ಲಿಕಾರ್ಜುನ ಅವರಿಂದ 15,000 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ಆಯುಕ್ತರಾದ ಬಿ.ವೆಂಕಟ್ ಸಿಂಗ್ ಅವರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *