ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠ ತಿಂಥಣಿ ಬ್ರಿಡ್ಜ್ ಪರಮಪೂಜ್ಯರಾದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮವು ಫೆಬ್ರವರಿ 1 ರಂದು ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಸಂಸದರು, ಶಾಸಕರು, ಮಠದ ಭಕ್ತರು, ಆಗಮಿಸಲಿದ್ದಾರೆಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಭೀಮಣ್ಣ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಕಾಗಿನೆಲೆ ಗುರುಪೀಠದ ಜಗದ್ಗುರುಗಳು, ವಿವಿಧ ಮಠಗಳ ಮಠಾಧೀಶರು, ಪರಮಪೂಜ್ಯರು, ಸೇರಿ ಒಟ್ಟು 60 ಜನ ಮಠಾಧೀಶರು, ಜ.31ಕ್ಕೆ ಆಗಮಿಸಿ, ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳ ಸಮಾಧಿಯ ಬಳಿಯಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ.

ನಂತರ ಪೂಜೆಯಲ್ಲಿ ಪಾಲ್ಗೊಂಡ ಎಲ್ಲಾ ಸ್ವಾಮೀಜಿಯವರಿಗೆ ಸನ್ಮಾನಿಸಲಾಗುವುದು.
ಫೆ.1ರಂದು ರಾಜ್ಯ ಕುರುಬರ ಸಂಘದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು, ಸಚಿವ ಸತೀಶ ಜಾರಕಿಹೊಳಿ, ಹಾಗೂ ಸಮಾಜದ ಹಿರಿಯರು, ಗುರುಗಳು, ಭಾಗವಹಿಸಲಿದ್ದಾರೆ. ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಅವರ ಮೇಲುಸ್ತುವಾರಿಯಲ್ಲಿ ಈ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ. ಸುಮಾರು 50 ರಿಂದ 60 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಈ ವೇಳೆ: ಕನಕ ಗುರುಪೀಠದ ತಾಲೂಕು ಅಧ್ಯಕ್ಷ ಅಮರೇಶಪ್ಪ ಮೈಲಾರ, ಕುರುಬ ಸಮಾಜದ ಮುಖಂಡರಾದ ಎಂ.ದೊಡ್ಡಬಸವರಾಜ, ಹಾಲುಮತ ಸಮಾಜದ ಉಪಾಧ್ಯಕ್ಷ ಮಲ್ಲಪ್ಪ ಮೈಲಾರ, ವರ್ತಕರ ಸಂಘದ ಕಾರ್ಯದರ್ಶಿ ಫಕೀರಪ್ಪ ತಿಡಿಗೋಳ, ಕಿಚ್ಚಾ
ಸುರೇಶ, ಪಿಡಿಒ ಹುಚ್ಚಪ್ಪ ನೇಗಿಲಿ, ಟಿ.ಶಿವು, ನಾಗಪ್ಪ, ನಾಗರಾಜ ಬಾದರ್ಲಿ, ಬಸವರಾಜ ಗೊರೇಬಾಳ, ಸೇರಿದಂತೆ ಸಮಾಜದ ಅನೇಕ ಮುಖಂಡರು ಇದ್ದರು.

Leave a Reply

Your email address will not be published. Required fields are marked *