ಲಿಂಗಸಗೂರು.ಜ.30 ಸಾರ್ವಜನಿಕ ಆಸ್ಪತ್ರೆಯಲ್ಲಿ ಹೃದಯ ರೋಗ ತಜ್ಞರ ಕೊರತೆ ಇರುವುದರಿಂದ, ಹೃದಯ ಸಮಸ್ಯೆಗಳಿಂದ ಬಳಲುವ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಹೋಗಬೇಕಾಗಿದ್ದು, ಇದರಿಂದ ಭಾರೀ ಆರ್ಥಿಕ ಹೊರೆ ಎದುರಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ಸಿಗದೆ ಜೀವಾಪಾಯ ಉಂಟಾಗುವ ಘಟನೆಗಳೂ ನಡೆಯುತ್ತಿವೆ.
ಬಡ ಮತ್ತು ಸಾಮಾನ್ಯ ಜನರ ಹಿತದೃಷ್ಟಿಯಿಂದ, ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಶ್ವತವಾಗಿ ಹೃದಯ ರೋಗ ತಜ್ಞರನ್ನು ನೇಮಕ ಮಾಡುವುದು ಅತ್ಯಂತ ಅಗತ್ಯವಾಗಿದೆ. ಇದರಿಂದ ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯುವುದರೊಂದಿಗೆ ಅನಾವಶ್ಯಕ ಸಾವುಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಅಲ್ಲದೇ ಕಿವಿ, ಮೂಗು, ಗಂಟಲು ತಜ್ಞರು ಇಲ್ಲದೇ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು
ಜನವರಿ 13 ರಂದು ಸಾರ್ವಜನಿಕ ಆಸ್ಪತ್ರೆಗೆ ಹೃದಯ ರೋಗ ತಜ್ಞರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಕರವೇ ಸಂಘಟನೆಯು ಅರೆಬೆತ್ತಲೆ ಮೆರವಣಿಗೆ ಮಾಡಿ
ಮನವಿ ಸಲ್ಲಿಸಿದ್ದರು . ಪ್ರತಿಭಟನೆ ಹಾಗೂ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೃದಯ ರೋಗ ತಜ್ಞರನ್ನು ನೇಮಕ ಮಾಡಿದ್ದು, ಬುಧುವಾರ ಬೆಳಿಗ್ಗೆ ಹೃದಯ ರೋಗ ತಜ್ಞರು ಅಧಿಕಾರ ಸ್ವೀಕರಿಸಿದರು. ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಿದರು . ನಮ್ಮ ಮನವಿಗೆ ಸ್ಪಂಧಿಸಿದ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನೆಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಜಿಲಾನಿಪಾಷಾ, ರವಿಕುಮಾರ ಬರಗುಡಿ, ಅಜೀಜ್ ಪಾಷಾ, ಮೋಸಿನ್ ಖಾನ್, ಅಲ್ಲಾವುದ್ದೀನ್, ತಿಮ್ಮನಗೌಡ, ಮಲ್ಲಣ್ಣ, ಮರೆಪ್ಪ, ಬಾಬು, ವಿರೇಶ ಹಿರೇಮಠ, ಪ್ರಭುಗೌಡ, ಪರಮಣ್ಣ, ಪ್ರಭು ಕಾಳಾಪೂರು, ರಾಜು ನಾಯಕ, ಶ್ರೀನಿವಾಸ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *