ಲಿಂಗಸಗೂರು : ಜ 29.ಪುರಸಭೆ ವ್ಯಾಪ್ತಿಯಲ್ಲಿನ ಸುಮಾರು ಲೇಔಟ್‌ಗಳಿದ್ದು, ಆ ಲೇಔಟ್‌ಗಳಲ್ಲಿರುವ ಉದ್ಯಾನವನ ಹಾಗೂ ನಾಗರೀಕ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಪುರಸಭೆಗೆ ಸೇರಿದ ಉದ್ಯಾನವನ ಹಾಗೂ ನಾಗರೀಕರ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗವನ್ನು ಹದ್ದು ಬಸ್ತ್ ಮಾಡಿ ನಾಮಫಲಕ ಅಳವಡಿಸುವಂತೆ ಕರವೇ
ಪ್ರವೀಣ್ ಶೆಟ್ಟಿ ಬಣದ ತಾಲೂಕ ಅಧ್ಯಕ್ಷ ಆಂಜನೇಯ ಭಂಡಾರಿ ಮುಖ್ಯಧಿಕಾರಿಗೆ ಮನವಿಯನ್ನು ಸಲ್ಲಿಸಿ ಮಾತನಾಡಿದ ಅವರು
ಪುರಸಭೆಗೆ ಸೇರಿದ ಜಾಗೆಗಳು ಇನ್ನು ಕೆಲವು ಎಲ್ಲಿ ಇವೆ ಎಂದು ತಿಳಿಯದಾಗಿದೆ. ಲೇಔಟ್ ಮಾಲೀಕರು ಉದ್ಯಾನವನ ಜಾಗವನ್ನು ನಿವೇಶಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿಕೊಂಡಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ಲೇಔಟ್‌ಗಳಲ್ಲಿರುವ ಉದ್ಯಾನವನ ಹಾಗೂ ನಾಗರೀಕರ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗಗಳನ್ನು ಗುರುತಿಸಿ ಹದ್ದು ಬಸ್ತ್ ಮಾಡಿ ಉದ್ಯಾನವನ ಹಾಗೂ ನಾಗರೀಕರ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗ ಎಂದು ನಾಮಫಲಕಗಳನ್ನು ಹಾಕಬೇಕು . ಒಂದು ವಾರದಲ್ಲಿ ಈ ನಮ್ಮ ಮನವಿಗೆ ಸ್ಪಂಧಿಸದಿದ್ದರೆ, ತಮ್ಮ ಕಾರ್ಯಾಲಯದ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು .

