ಮಾನ್ವಿ. ಆಹಾರ ಇಲಾಖೆಯಲ್ಲಿ ಶಿವಪ್ಪ ಹಳ್ಳಿ ಹೊಸೂರು ಶಾಮೀಲಾಗಿರುವುದಿಲ್ಲ.ಹನುಮೇಶನಾಯಕರವರು ಉದ್ದೇಶ ಪೂರ್ವಕವಾಗಿ ಅವರ ಹೆಸರಿಗೆ ಕಳಂಕ ತರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ರಾಮಣ್ಣ ನಾಯಕ ಜಿಲ್ಲಾಧ್ಯಕ್ಷರು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಯಚೂರು ಇವರು ಈ ಪತ್ರಿಕೆಯ ಮೂಲಕ ತಿಳಿಸಿದ್ದಾರೆ.ಇಲಾಖೆಯ ನಿಯಮಗಳನ್ನು ಧಿಕ್ಕರಿಸಿರುವುದಿಲ್ಲ ಇಲಾಖೆಯಲ್ಲಿ ನಿವೃತ್ತಿಯಾದರೂ ಕೂಡ ಅವರು ಅನೈತಿಕಾವಾಗಿ ವರ್ತಿಸಿರುವುದಿಲ್ಲ ಎಂದು ಹೇಳಿದರು.
ಹನುಮೇಶ ನಾಯಕರವರು ಸರ್ಕಾರದ ಮಹತ್ವದ ಯೋಜನೆಗಳಾದ ಆಹಾರ ಧಾನ್ಯ ವಿತರಣೆಯಲ್ಲಿ ಉದ್ದೇಶಪೂರ್ವಕ ಅಕ್ರಮ, ಅರ್ಹ ಫಲಾನುಭವಿಗಳಿಗೆ ವಂಚನೆ ಹಾಗೂ ಅಧಿಕಾರ ದುರುಪಯೋಗ ನಡೆಸಲಾಗಿದೆ ಎಂದು ಹೇಳುತ್ತಿದ್ದಾರೆ ಅದು ಶುದ್ಧ ಸುಳ್ಳು. ನ್ಯಾಯ ಬೆಲೆ ಅಂಗಡಿಯ ಮಾಲೀಕರಿಗೆ ಸರಕಾರದಿಂದ ಎಷ್ಟು ಅಕ್ಕಿ ಬರುತ್ತದೆ ಅಷ್ಟು ಅಕ್ಕಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡುತ್ತಿದ್ದಾರೆ.ಇದರಿಂದ ಜನರಿಗೆ ಬಹಳ ಅನುಕೂಲವಾಗುತ್ತಿದೆ. ಇದರಿಂದ ಬಡ ಹಾಗೂ ಶ್ರಮಿಕ ವರ್ಗದ ಜನರಿಗೆ ಅನುಕೂಲವಾಗುತ್ತಿದೆ.
ಶಿವಪ್ಪ ಹಳ್ಳಿ ಹೊಸೂರು ಅವರ ಮೇಲೆ ಉದ್ದೇಶ ಪೂರ್ವ ಕವಾಗಿ ಹನುಮೇಶ ನಾಯಕರವರು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ರಾಮಣ್ಣ ನಾಯಕ ಜಿಲ್ಲಾಧ್ಯಕ್ಷರು ನಾಯಕ ಆಗ್ರಹಿಸಿದರು.

