ರಾಯಚೂರು ಜನವರಿ 27 (ಕರ್ನಾಟಕ ವಾರ್ತೆ): ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೊರ್ವಿಹಾಳ ಗ್ರಾಮದ ನಿವಾಸಿ ಸ್ವಾಮಿ ತಂದೆ ರಾಮಪ್ಪ (38) ಎಂಬ ಕಾಣೆಯಾದ ಬಗ್ಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 230/2025 ಕಲಂ ಮನುಷ್ಯ ಕಾಣೆರಡಿ ಪ್ರಕರಣ ದಾಖಲಾಗಿದೆ.
ಈತನು ದಿನಾಂಕ: 05-12-2025ರ ರಾತ್ರಿ 8 ಗಂಟೆ ಸುಮಾರಿಗೆ ಗುಂಜಳ್ಳಿಯಲ್ಲಿ ಉರುಸು ಕಾರ್ಯಕ್ರಮ ಮುಗಿಸಿಕೊಂಡು ಕೊರ್ವಿಹಾಳ ಗ್ರಾಮದ ತಮ್ಮ ಮನೆಗೆ ಹೋಗಿ, ಮನೆಯಲ್ಲಿ ತನ್ನ ತಾಯಿಗೆ ಹೊರಗಡೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾನೆ.
ಚಹರೆ: ವಯಸ್ಸು 38 ವರ್ಷ, ಉದ್ಯೋಗ ಟ್ರ‍್ಯಾಕ್ಟರ್ ಚಾಲಕ. ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ಚಪ್ಪಟೆ ಮುಖ, ಕಪ್ಪು ಕೂದಲು, ನೀಲಿ ಬಣ್ಣದ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಬಟ್ಟೆಯನ್ನು ಧರಿಸಿರುತ್ತಾನೆ.
ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆ ಮಾತಾಡುತ್ತಾನೆ. ಈ ಕಾಣೆಯಾದ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ 9480803850, ಸಿಪಿಐ ಗ್ರಾಮೀಣ ವೃತ್ತ ರಾಯಚೂರು: 9480803832, ಡಿವೈಎಸ್ಪಿ ರಾಯಚೂರು 9480803820, ರಾಯಚೂರು ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08532-235635ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

