ರಾಯಚೂರು ಜನವರಿ 27 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲಾ ಉತ್ಸವದ ಕ್ಯಾಲೆಂಡರ್ನಂತೆ ಜನವರಿ 27ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಸೈಕ್ಲಾಥಾನ್ ಆಯೋಜನೆ ಮಾಡಲಾಗಿತ್ತು.
ಸೈಕಲ್ ಮ್ಯಾರಾಥಾನದಲ್ಲಿ ಭಾಗಿಯಾಗಲು ಬೆಳಗ್ಗೆ 6 ಗಂಟೆ ವೇಳೆಗೆ ನಗರದ ಮಹಾತ್ಮ ಗಾಂಧೀಜಿ ಕ್ರೀಡಾಂಗಣದತ್ತ ವೈದ್ಯರು ಸೇರಿದಂತೆ ಸೈಕಲ್ ಅಸೋಸಿಯೇಷನ್ ಸದಸ್ಯರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಯುವಜನರು, ನಾನಾ ಬಗೆಯ ತಮ್ಮ ತಮ್ಮ ನೆಚ್ಚಿನ ಸೈಕಲ್ ಏರಿ ಆಗಮಿಸಿ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗಿಯಾದರು.
ಬೆಳಗ್ಗೆ, ಸೈಕಲ್ ಏರಿ ಜಿಲ್ಲಾ ಕ್ರೀಡಾಂಗಣದತ್ತ ಆಗಮಿಸಿದ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಸೈಕಲ್ ತುಳಿಯುತ್ತ ಸೈಕಲ್ ಮ್ಯಾರಾಥಾನಗೆ ಹಸಿರು ನಿಶಾನೆ ತೋರಿದರು.
ಜಿಲ್ಲಾ ಕ್ರೀಡಾಂಗಣದಿಂದ ಸೈಕಲ್ ಸವಾರಿ ಆರಂಭಿಸಿದ ಸ್ಪರ್ಧಾಗಳುಗಳು ಬಸವೇಶ್ವರ ವೃತ್ತ, ಜಿಲ್ಲಾ ಪಂಚಾಯತ್, ಕನಕದಾಸ ವೃತ್ತ, ಎಸ್ಪಿ ಕಚೇರಿ ಮಾರ್ಗವಾಗಿ ಯರಮರಸ್, ಬೈಪಾಸ್ ಮೂಲಕ ಯಕ್ಲಾಸಪೂರ್, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಾರ್ಗವಾಗಿ ಮರಳಿ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಸೇರಿದರು.
ಸೈಕಲ್ ಸವಾರರ ಸುರಕ್ಷತೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸುರಕ್ಷತಾ ಕ್ರಮ ವಹಿಸಲಾಗಿತ್ತು. ಸೈಕಲ್ ಸವಾರರ ಮುಂದೆ ಪೊಲೀಸ್ ಕಾನ್ವೆಗೆ ವ್ಯವಸ್ಥೆ ಮಾಡಲಾಗಿತ್ತು.
ಈ ಸ್ಪರ್ಧೆಯಲ್ಲಿ ಬೆಲಂ ಪ್ರಕಾಶ್ ಅವರು ಪ್ರಥಮ ಬಹುಮಾನ, ರಾಘವೇಂದ್ರ ಗುಪ್ತ ದ್ವಿತೀಯ ಬಹುಮಾನ ಮತ್ತು ಸಣ್ಣ ವೀರೇಶ ಅವರು ತೃತೀಯ ಬಹುಮಾನ ಗಿಟ್ಟಿಸಿದರು. ಈ ಸ್ಪರ್ಧೆಯಲ್ಲಿ ಏಕೈಕ ಮಹಿಳಾ ಪಟುವಾಗಿ ಡಾ.ಶಿಲ್ಪ ಅವರು ಭಾಗಿಯಾಗಿ ಗಮನ ಸೆಳೆದರು. ಪ್ರಥಮ ಸ್ಥಾನಕ್ಕೆ 10 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 5 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ 3 ಸಾವಿರ ರೂ.ಗಳನ್ನು ನೀಡಿ ಗೌರವಿಸಲಾಯಿತು.
ಶಾಲಾ ವಿದ್ಯಾರ್ಥಿಗಳು ಭಾಗಿ: ಈ ಸೈಕಲ್ ಮ್ಯಾರಾಥಾನ್‌ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಭಾಗಿಯಾಗಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಾದ ಹಸನ್, ಶ್ರೇಯಸ್, ಗಣೇಶ್ ಮಿಶ್ರಬ್, ಮಹಮ್ಮದ್ ಆಸಂಖಾನ್, ದೇವರಾಜ್, ಮನೀಶ್, ಶ್ರೇಯಾಂಕ ಅವರು ಸಹ ಭಾಗಿಯಾಗಿ ಸೈಕಲ್ ಓಡಿಸಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ, ರಾಯಚೂರು ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ರಾಯಚೂರು ತಹಸೀಲ್ದಾರ್ ಸುರೇಶ್ ವರ್ಮ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣ ಶಾವಂತಗೇರಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರೇಶ್ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ.ವಿಜಯಶಂಕರ್, ಎನ್.ವಿ.ಡಿ ಸ್ಪರ್ಧಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ದಂಡಪ್ಪ ಬಿರಾದಾರ, ಲಿವಿಂಗ್ ಆಫ್ ಆರ್ಟ ಸಂಸ್ಥೆಯ ಮಲ್ಲಿಕಾರ್ಜುನ ಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರು, ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಬಸವರಾಜ, ಕೃಷ್ಣ ತುಂಗೆ ರೋಟರಿ ಕ್ಲಬ್‌ನ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.


