ರಾಯಚೂರು ಜನವರಿ 26 (ಕರ್ನಾಟಕ ವಾರ್ತೆ): 2025-26ನೇ ಸಾಲಿನಲ್ಲಿ 2026-27ನೇ ಸಾಲಿನ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.
6ನೇ ತರಗತಿಗೆ ದಾಖಲಾತಿಗಾಗಿ 25-02-2026 ರವರೆಗೂ www. schooleducation. karnataka.gov.in ಮತ್ತು www.vidyavahini.karnataka.gov.in ವೆಬ್ ತಾಣಗಳ ಮೂಲಕ ಆದರ್ಶ ವಿದ್ಯಾಲಯ ಮಾದರಿ ಶಾಲೆಯ ಪೋಷಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
2025-26ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲ್ಲೂಕಿನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಯಾ ತಾಲ್ಲೂಕಿನ ಖಾಯಂ ನಿವಾಸಿಗಳ ಮಕ್ಕಳು ಬೇರೆ ತಾಲ್ಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಸಹ 6ನೇ ತರಗತಿಗೆ ಮೂಲ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಚಿಸಿದ್ದಲ್ಲಿ ಮೂಲ ತಾಲ್ಲೂಕಿನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಡಯಟ್ ಯರಮರಸ್‌ನ ನೋಡಲ್ ಅಧಿಕಾರಿ ಉಪನ್ಯಾಸಕರಾದ ಕನಕಪ್ಪ ಮೊ. ದೂ:9945527472 ಹಾಗೂ ವಿವಿಧೆಡೆಯ ಆದರ್ಶ ವಿದ್ಯಾಲಯಗಳ ಯರಮರಸ್ ಮುಖ್ಯಾಧ್ಯಾಪಕರು ಮೊಬೈಲ್ 9481089777, ಮಾನವಿ ಮುಖ್ಯಾಧ್ಯಾಪಕರು ಮೊ:9945542681, ದೇವದುರ್ಗದ ಮುಖ್ಯಾಧ್ಯಾಪಕರು ಮೊ: 9902905064., ಲಿಂಗಸೂಗೂರು ಮುಖ್ಯಾಧ್ಯಾಪಕರು ಮೊ: 9611365346 ಅಥವಾ ಸಿಂಧನೂರು ಮುಖ್ಯಾಧ್ಯಾಪಕರು ಮೊ: 9902858592 ಸಂಪರ್ಕಿಸಬಹುದು ಎಂದು ಡಯಟ್ ಯರಮರಸ್ ರಾಯಚೂರದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಅಭಿವೃದ್ಧಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
