ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ತಾಲೂಕಿನ ಒಳಬಳ್ಳಾರಿ ಗ್ರಾಮದ ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಶ್ರೀ.ಮ.ನಿ.ಪ್ರ.ಸ್ವರೂಪಿ ಚನ್ನಬಸವತಾತನವರ 43ನೇ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಶ್ರೀಮಠದಲ್ಲಿ ಎಂಎಲ್ಸಿ ಬಸನಗೌಡ ಬಾದರ್ಲಿ ತಮ್ಮ ಅನುದಾನದಲ್ಲಿ “ಸಭಾಭವನ” ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಹರಗುರುಚರ ಮೂರ್ತಿಗಳಿಂದ ನೆರವೇರಿಸಲಾಯಿತು.

ಸಿಂಧನೂರು ತಾಲೂಕಿನ ರವುಡಕುಂದಾ ಗ್ರಾಮದ ವೇದ ಪಾಠ ಶಾಲಾ, ಸಂಸ್ಥಾನ ಹಿರೇಮಠದ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪೂಜ್ಯ ಗುರುಗಳೊಂದಿಗೆ ಭೂಮಿ ಪೂಜೆ ನೆರವೇರಿಸಿ, ತಾಲೂಕಿನ ರಮಾಕ್ಯಾಂಪಿನ ಸಾರ್ವಜನಿಕ ಸಮುದಾಯ ಭವನ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೇಳೆ: ವೆಂಕಟೇಶ ರಾಗಲಪರ್ವಿ, ಯಂಕನಗೌಡ ಗಿಣಿವಾರ, ಶರಣಯ್ಯಕೋಟೆ, ಹೊನ್ನನ್ನಗೌಡ ಬೆಳಗುರ್ಕಿ, ಪಂಪಾಪತಿ ಅಲಬನೂರು, ಶಿವಬಸನಗೌಡ, ರಂಗನಗೌಡ, ಚಂದ್ರಶೇಖರ್, ಶ್ಯಾಮಿದ್ ಸಾಬ್, ಕನಕಪ್ಪ, ಸದ್ದಾಂ, ಅಮರೇಶ ಗಿರಿಜಾಲಿ, ರಾಮಲಿಂಗಾರೆಡ್ಡಿ ಬೆಳಗುರ್ಕಿ, ಚನ್ನಬಸವ ಪನ್ನೂರು, ಹಾಗೂ ಇತರರು ಉಪಸ್ಥಿತರಿದರು.

Leave a Reply

Your email address will not be published. Required fields are marked *