ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ ಸಾಬಮ್ಮ ಗಂಡ ಗಂಗಪ್ಪ ಇವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು. ಗ್ರಾಮ ಸಭೆಯ ಕುರಿತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಹೂಗಾರ ಸಭೆಯಲ್ಲಿ ಮಾತನಾಡಿ ಬಹುದಾನದ ಬೇಡಿಕೆಯಾದ ಗ್ರಾಮ ಪಂಚಾಯತಿ ವಿಭಜನೆ ಮಾಡಬೇಕೆನ್ನುವುದು, ಜನಸಂಖ್ಯೆ ಆಧಾರದ ಮೇಲೆ, ಸಾರ್ವಜನಿಕರಿಗೆ ದೂರ ಇರುವ ಕಾರಣ ಈಗಾಗಲೇ ಈಗಿರುವ ಅಧ್ಯಕ್ಷರು ಸರ್ವ ಸದಸ್ಯರು, ಪಂಚಾಯತಿ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಗ್ರಾಮಸ್ಥರ ಒತ್ತಾಯದ ಮೇರೆಗೆ ಮತ್ತು ಗ್ರಾಮ ಪಂಚಾಯಿತಿ ದೊಡ್ಡದಾಗಿದ್ದು ಅದಕ್ಕಾಗಿ ವಿಭಜನೆ ಮಾಡಬೇಕೆಂದು ಆಗ್ರಹ ಇರುವ ಕಾರಣ ಎಲ್ಲರ ಒಪ್ಪಿಗೆಯಿಂದ ಅನುಮೋದನೆಯನ್ನು ಮಾಡಲಾಯಿತು ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಿಂಪಡಿದಿರುವ ಹಾಗೂ ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ವಿಕಸಿತ ಭಾರತ ಗ್ಯಾರಂಟಿ ರೋಜಗಾರ್ ಅಜೇವಿಕ್ ಮಿಷನ್ ಕುರಿತು ಸಮಗ್ರವಾಗಿ ಚರ್ಚಿಸಲು ಈ ಒಂದು ವಿಶೇಷ ಗ್ರಾಮ ಸಭೆಯನ್ನು ಕರೆಯಲಾಯಿತು ಎಂದು ಪಿಡಿಒ ವಿಶ್ವನಾಥ ಹೂಗಾರ ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕೆಡಿಪಿ ಸದಸ್ಯ ಕರಿಯಪ್ಪ, ಜಗದೀಶ್ ಚಂದ್ರಸ್ವಾಮಿ ಅಧ್ಯಕ್ಷರು ಪ್ರಾಥಮಿಕ ಸಹಕಾರಿ ಸಂಘ, ಬಿ ಕರಿಯಪ್ಪ, ಬಸವರಾಜಗೌಡ ವಡಿಗೇರಿ, ಈರನಗೌಡ ದಳಪತಿ, ಸಣ್ಣ ವಾಸನಗೌಡ್ರು, ಬಸವರಾಜ ರಾಮತ್ನಾಳ, ಏಬೆಲ್ ರಾಜ, ಯೋಗೇಶರಾವ್ ದೇಸಾಯಿ, ಶರಣಪ್ಪ ಹಿರೇಮನಿ ಹಾಗೂ ಸಿಬ್ಬಂದಿಗಳಾದ ರಂಗಪ್ಪ, ಗ್ಯಾನಪ್ಪ ಹಾಗೂ ಗ್ರಾಮಸ್ಥರು, ಇನ್ನಿತರರು ಇದ್ದರು.

Leave a Reply

Your email address will not be published. Required fields are marked *