ಲಿಂಗಸಗೂರು : ಜ 27  ಬಾರತ ದೇಶ ಸ್ವಾತಂತ್ರ ಪಡೆದ ನಂತರದಲ್ಲಿ ರಾಜಕೀಯವಾಗಿ ಮಾತ್ರವಲ್ಲ, ಬೌಗೋಳಿಕವಾಗಿಯೂ ಚೂರು ಚೂರಾದ ಸ್ಥಿತಿಯಲ್ಲಿತ್ತು. 560ಕ್ಕೂ ಹೆಚ್ಚು ಸಂಸ್ಥಾನಗಳು, ಮತ್ತು ಸ್ವಾಯತ್ತತೆಯ ಆಕಾಂಕ್ಷೆಗಳು ದೇಶದ ಏಕತೆಗೆ ದೊಡ್ಡ ಸವಾಲಾಗಿ ನಿಂತಿದ್ದವು. ಇಂತಹ ಸಂಕಷ್ಟದ ಹೊತ್ತಿನಲ್ಲಿ ”ಭಾರತದ ಉಕ್ಕಿನ ಮನುಷ್ಯ” ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದ ಏಕೀಕರಣವನ್ನು ಮಾಡಿದವರು ಎಂದು ಸಹಾಯಕ ಆಯುಕ್ತ ಬಸವಣಪ್ಪ ಕಲಶೆಟ್ಟ ಹೇಳಿದರು .
ಅವರಿಂದು ತಾಲೂಕ ಆಡಳಿತ ಆಯೋಜಿಸಿದ್ದ 77 ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ನಂತರ ಮಾತನಾಡಿದ ಅವರು,

ಬಾರತ ಸ್ವಾತಂತ್ರ್ಯ ನಂತರದ ಸರಕಾರದಲ್ಲಿ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭ ಬಾಯಿ ಪಟೇಲರು, ರಾಜತಾಂತ್ರಿಕತೆಯ ದೃಢ ನಿರ್ಧಾರ ಮತ್ತು ಅಗತ್ಯವಿದ್ದಾಗ ಕಠಿಣ ಕ್ರಮಗಳ ಮೂಲಕ ಸಂಸ್ಥಾನಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸುವ ಮಹತ್ವದ ಕೆಲಸಕ್ಕೆ ಕೈ ಹಾಕಿದರು. ಹೈದರಾಬಾದ್, ಜುನಾಗಡ , ಕಾಶ್ಮೀರ ಸೇರಿದಂತೆ ಅನೇಕ ಸಂಕೀರ್ಣ ಸಮಸ್ಯೆಗಳ ನಡುವೆ, ಪಟೇಲರು ತೋರಿದ ದೂರದೃಷ್ಟಿ ಮತ್ತು ಧೈರ್ಯವೇ ದೇಶದ ಭವಿಷ್ಯವನ್ನು ನಿರ್ಧರಿಸಿತು. ಸಂಸ್ಥಾನದ ರಾಜರು ಮತ್ತು ನವಾಬರುಗಳಿಗೆ ಇನ್‌ಸ್ಟ್ರುಮೆಂಟ್ ಆಫ್ ಆಕ್ಸೆಷನ್ ಮೂಲಕ ಭಾರತಕ್ಕೆ ಸೇರುವ ಮಾರ್ಗವನ್ನು ತೆರದ ಪಟೇಲರು, ದೇಶದ ಏಕತೆಗೆ ಧಕ್ಕೆ ತರಬಹುದಾದ
ಎಲ್ಲ ಪ್ರಯತ್ನಗಳನ್ನು ಸಮರ್ತವಾಗಿ ತಡೆದರು. ಹೈದರಾಬಾದ್ ಸಮಸ್ಯೆಯಲ್ಲಿ ಕೈಗೊಂಡ ಆಪರೇಷನ್ ಪೋಲೋ ಭಾರತದ ಏಕತೆಗೆ ಪಟೇಲರ ನಿರ್ಣಾಯಕ ನಾಯಕತ್ವದ ಉದಾಹರಣೆಯಾಗಿ ಉಳಿದಿದೆ.

ಅಲ್ಲದೇ ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆ ಹಾಗೂ ಭಾತೃತ್ವವನ್ನು ತಂದು ಕೊಟ್ಟಿದೆ ಇದರ ಮುಖ್ಯ ರೂವಾರಿ ಡಾ.ಬಿ.ಆರ್. ಅಂಬೇಡ್ಕರ್ ರವರು ಇವರ ಶ್ರಮದ ಪಲವಾಗಿ ನಮ್ಮ ದೇಶ ಆರ್ಥಿಕವಾಗಿ ಬಲಾಡ್ಯವನ್ನು ಹೊಂದಿದೆಯಲ್ಲದೇ ಮುಂದಿನ ದಿನಗಳಲ್ಲಿ ವಿಶ್ವದ ನಂಬರ್ ಒನ್ ದೇಶವಾಗಲಿವೆ ಎಂದರು.
ನಂತರ ಮಾತನಾಡಿದ ಶಾಸಕ ಮಾನಪ್ಪ ವಜ್ಜಲ್ ಸಂವಿಧಾನ ಜಾರಿಯಾಗಿ ಇಂದಿಗೆ 77 ವರ್ಷಗಳು ಕಳೆದಿವೆ. ಅಂದಿನಿಂದ ಇಂದಿನ ವರೆಗೆ ನಮ್ಮ ದೇಶ ಸುಭದ್ರವಾಗಿ ನಡೆಯುತ್ತಿದೆ. ಮೋದಿಯವರ ದೃಢ ನಿರ್ಧಾರಗಳಿಂದ ದೇಶ ಆರ್ಥಿಕವಾಗಿ ಬಲಾಧ್ಯವಾಗುತ್ತಿದ್ದು, ವಿಶ್ವದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ಶಶಿಧರ ಪಾಟೀಲ್, ಪೊಲೀಸ್ ಉಪ ಅಧೀಕ್ಷಕ ದತ್ತಾತ್ರೇಯ ಕರ್ನಾಡ್, ತಹಶೀಲ್ದಾರ್ ಕು.ಸತ್ಯಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ , ಹಾಜಿಬಾಬ ಕಲ್ಯಾಣಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸಾರ್ವಜನಿಕರು ಇದ್ದರು .

Leave a Reply

Your email address will not be published. Required fields are marked *