ರಾಯಚೂರು ಜನವರಿ 26 (ಕರ್ನಾಟಕ ವಾರ್ತೆ): ರಾಯಚೂರು ಗ್ರಾಮೀಣ ಶಾಸಕರ ಕಾರ್ಯಾಲಯದಲ್ಲಿ ಜನವರಿ 26ರಂದು 77ನೇ ಗಣರಾಜೋತ್ಸವದ ಅಂಗವಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರು ಧ್ವಜಾರೋಹಣ ನೆರವೇರಿಸಿದರು.
ಇದೆ ವೇಳೆ ಶಾಸಕರು, ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.
ರಾಜಪ್ರಭುತ್ವದ ವ್ಯವಸ್ಥೆಯಿಂದ ನಾವುಗಳು ಹೊರಬಂದು, ಪ್ರಜೆಗಳೇ ಮುಖ್ಯ ಎನ್ನುವ ಪ್ರಜಾಪ್ರಭುತ್ವದ ಆಡಳಿತಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ದೇಶದ ಆಡಳಿತದ ನೀತಿ ನಿರೂಪಣೆ ತಿಳಿಸುವ ಸಂವಿಧಾನ ಮತ್ತು ಸಂವಿಧಾನದ ಆಶಯಗಳಿಗೆ ನಾವು ಬದ್ಧರಾಗಿ ಸಾಗಬೇಕು. ಸಂವಿಧಾನ ಜಾರಿಗೆ ಶ್ರಮಿಸಿದ ಎಲ್ಲ ಮಹನೀಯರನ್ನು ಸ್ಮರಿಸೋಣ ಎಂದು ಇದೆ ವೇಳೆ ಶಾಸಕರು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಗಿಲ್ಲೇಸೂಗುರ ಮತ್ತು ದೇವಸೂಗುರ ಬ್ಲಾಕ್ ಅಧ್ಯಕ್ಷರು, ಹಿರಿಯ ಮುಖಂಡರು, ಮಹಿಳಾ ಮುಖಂಡರು ಮತ್ತು ಇನ್ನೀತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *