ಅರಕೇರಾ:
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸಿ, ವಿಬಿ ಜಿ ರಾಮ್ ಜಿ ಕಾಯ್ದೆ ರೂಪಿಸಿರುವುದನ್ನು ರದ್ದುಗೊಳಿಸಿ ಬೇಕು. ಮೊದಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಮರುಸ್ಥಾಪಿಸುವಂತೆ ಸರ್ವಾನುಮತದಿಂದ ಠರಾವು ಪಾಸ್ ಮಾಡಿ ದಾಖಲಿಸಬೇಕು ಮತ್ತು ಪಾಸ್ ಮಾಡಿದ ಠರಾವಿನ ಪ್ರಮಾಣಿತ ಪ್ರತಿಯನ್ನು ನಮಗೆ ನೀಡುವಂತೆ ಕೂಲಿ ಕಾರ್ಮಿಕರ ಮತ್ತು ಮೇಟ್ ಗಳು ಸೋಮವಾರ ಬಿ.ಗಣೇಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಕೇಂದ್ರ ಸರ್ಕಾರವು ಮನರೇಗಾ ಕಾಯ್ದೆಯ ಸ್ವರೂಪವನ್ನು ಬದಲಿಸಿ ವಿಬಿ-ಗ್ರಾಮ್-ಜಿ ಎಂಬ ಹೊಸ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಹೊಸ ಕಾಯ್ದೆಯಲ್ಲಿ ಕಾರ್ಮಿಕರ ಹಕ್ಕುಗಳನ್ನು ಸೀಮಿತಗೊಳಿಸಲಾಗಿದ್ದು, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗುತ್ತಿದೆ, ಆದ್ದರಿಂದ ಈ ಕಾರ್ಮಿಕ ವಿರೋಧಿ ಕಾಯ್ದೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ದಿನಾಂಕ 26.01.2026 ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮ ಸಭೆಯಲ್ಲಿ ಕಾರ್ಮಿಕರ ವಿರೋಧಿ ವಿಬಿ-ಗ್ರಾಮ್-ಜಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಠರಾವು ಪಾಸ್ ಮಾಡಬೇಕು ಎಂದು ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ಬಾಲಯ್ಯ ದೊರೆ, ಬಸವರಾಜ ಪಂದ್ಯಾನ, ಮಲ್ಲಯ್ಯ ದಳವಾಯಿ, ಆಂಜನೇಯ ಅಬಕಾರಿ, ಶಿವರಾಜ್ ಬಾಬೆ, ಹನುಮಂತ್ರಾಯ ನಾಯಕ, ಹಾಜಿ ಮಸ್ತಾನ್, ಮಲ್ಲೇಶ್ ನಾಯಕ, ಬಾಲಯ್ಯ ಹುಲೆಗುಡ್ಡ, ರೆಡ್ಡಿ ನಾಯಕ, ರವಿ ಮೂಕ ನಾಯಕ ತಾಂಡಾ, ಗುರುಪಾದ, ಶಿವು ಗೊರ್ಲಿ, ಅಲ್ಲಿಸಾಬ್, ಮುದುಕಪ್ಪ, ಪ್ರಭು ಸ್ವಾಮಿ, ವಿರೇಶ ದಳವಾಯಿ ಮುಂತಾದವರು ಇದ್ದರು.

Leave a Reply

Your email address will not be published. Required fields are marked *