ಮಸ್ಕಿ: 77 ನೇ ಗಣರಾಜ್ಯೋತ್ಸವ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆಯ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಭಿನಂದನ್ ಸ್ಫೂರ್ತಿ ಧಾಮ ಮಸ್ಕಿ ಮಕ್ಕಳು ಉತ್ತಮ ನೃತ್ಯ ಪ್ರದರ್ಶನಕ್ಕಾಗಿ ಗೌರವಾನ್ವಿತ ಶಾಸಕರಾದ ಶ್ರೀ ಬಸವನಗೌಡ ತುರ್ವಿಹಾಳ ಹಾಗೂ ಗೌರವಾನ್ವಿತ ಮಂಜುನಾಥ್ ಭೋಗಾವತಿ ತಹಶೀಲ್ದಾರರು, ಗೌರವಾನ್ವಿತ ಅಮರೇಶ್ ಯಾದವ್,ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನೌಕರರ ಸಂಘದ ಅಧ್ಯಕ್ಷರು, ಆರಕ್ಷಕ ಇಲಾಖೆಯ ಅಧಿಕಾರಿಗಳು ಹಾಗು ಇನ್ನಿತರ ಅಧಿಕಾರಿಗಳಿಂದ ನೆನಪಿನ ಕಾಣಿಕೆ ಸ್ವೀಕಾರ ಮಾಡಲಾಯಿತು.

