ಮಾನ್ವಿ : ಪಟ್ಟಣದ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್ ಓಲೇಕಾರ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಡಾ. ವೆಂಕಟೇಶ್ ಓಲೇಕಾರ್ ಮಾತನಾಡಿ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯು ಸಂವಿಧಾನದ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ರವಿಚಂದ್ರ ಮಾತನಾಡಿ ನಮ್ಮ ದೇಶಕ್ಕೆ ಮಹಾತ್ಮ ಗಾಂಧಿಜೀ ಯವರು ಸ್ವಾತಂತ್ರ್ಯ ದೊರಕಿಸಿಕೊಟ್ಟರೆ ಭಾರತ ದೇಶಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನವನ್ನು ರಚನೆ ಮಾಡಿದರು ಎಂದು ಹೇಳಿದರು.ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಅಂಬಣ್ಣ ನಾಯಕ ಉಮಳಿ ಹೊಸೂರು ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ಬಲಿದಾನವಾದ ದಿನವೆಂದು ಕುರಿತು ತಿಳಿಸಿದರು. ನಂತರ ಆಂಜನೇಯ ನಸಲಾಪುರ ಮಾತನಾಡಿ ಸಂವಿಧಾನದ ಹಿನ್ನಲೆಯ ಬಗ್ಗೆ ತಿಳಿಸಿದರು. ಶ್ರೀ.ಎಸ್.ಎಂ.ಓ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀದೇವಿ ಮಾತನಾಡಿ ಸಂವಿಧಾನವು ನಾವು ಹೇಗೆ ಜೀವಿಸಬೇಕು. ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು. ಡಾ.ಹುಲಿಯಪ್ಪ ದುಮತಿ ಚಂದ್ರಶೇಖರ ಎಚ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶಂಕರಪ್ಪ ಅಂಗಡಿ, ವೆಂಕಟೇಶ್ವರ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಎಂ. ಡಿ ಅಶ್ರರ್ ಉಪನ್ಯಾಸಕರಾದ ಅಬ್ದುಲ್ ರಹೀಮ್,ಮಹಾದೇವ ಬೊಮ್ಮನಾಳ, ,ನಾಗರಾಜ ಚಿಮಲಾಪುರ, ಶಿಕ್ಷಕರಾದ ಆಂಜನೇಯ ಸುಂಕೇಶ್ವರ, ಪಾರ್ವತಿ, ವಿರುಪಾಕ್ಷಿ, ಮುಸ್ಕಾನ್ ಸಂತೋಷ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಂಜನೇಯ ನಿರೂಪಿಸಿದರೆ, ವಿರುಪಾಕ್ಷಿ ಸ್ವಾಗತಿಸಿದರು ಮಹಾದೇವ ವಂದಿಸಿದರು.

