ಮಸ್ಕಿ: ಪಟ್ಟಣದಲ್ಲಿ ಜನವರಿ ೨೮ ರಂದು ಶೋಭಾಯಾತ್ರೆ ಮತ್ತು ಹಿಂದೂ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಮ್ಮೇಳನ ಸಮಿತಿಯ ಅಶೋಕ ಠಾಕೂರ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೮ ರಂದು ಮಧ್ಯಾಹ್ನ ೩.೩೦ಕ್ಕೆ ಗಚ್ಚಿನಮಠದಿಂದ ಶೋಭಾಯಾತ್ರೆ ಆರಂಭಗೊAಡು ಹಳೇ ಬಸ್ ನಿಲ್ದಾಣ, ಪುರಸಭೆ ಕಾರ್ಯಾಲಯ ಮುಂಭಾಗ, ಗಾಡಿಭಾವಿ, ದೈವದಕಟ್ಟೆ ಮೂಲಕ ತೇರಿನ ಮನೆಯವೆರೆಗೆ ನಡೆಯಲಿದೆ. ತೇರು ಬಜಾರನಲ್ಲಿ ಸಂಜೆ ೫ ಗಂಟೆಗೆ ಹಿಂದು ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಹಿಂದು ಸಮ್ಮೇಳನದಲ್ಲಿ ಸುಮಾರು ೨ ಸಾವಿರ ಜನ ಸೇರಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹನುಮೇಶ ಕುಲ್ಕರ್ಣಿ, ಅಪ್ಪಾಜಿಗೌಡ, ಬಸವರಾಜ ಅಲ್ದಾರ್, ಶಿವರಡ್ಡಿ, ಅಭಿಜಿತ್ ಪಾಟೀಲ್ ಅಮರೇಶ ಮಾಟೂರು ಸೇರಿದಂತೆ ಇನ್ನಿತರರಿದ್ದರು.
ಮಸ್ಕಿಯಲ್ಲಿ ಹಿಂದು ಸಮ್ಮೇಳನ ಸಮಿತಿಯಿಂದ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದರು.

Leave a Reply

Your email address will not be published. Required fields are marked *