ಮಾನ್ವಿ : ರಾಯಚೂರು ಪಟ್ಟಣದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯತಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಶಾರದಾ ವಿದ್ಯಾನಿಕೇತನ ಶಿಕ್ಷಣ ಮಹಾವಿದ್ಯಾಲಯ(ಬಿ.ಇಡಿ)ದ ಪ್ರಶಿಕ್ಷಣಾರ್ಥಿ ಕು. ಪದ್ಮಾವತಿ ತಂದೆ ಬಸವರಾಜ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದರಿಂದ ಈ ವಿದ್ಯಾರ್ಥಿನಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ವಿದ್ಯಾರ್ಥಿನಿ ಶಾರದಾ ಶಿಕ್ಷಣ ಸಂಸ್ಥೆ(ರಿ) ಗೆ ಕೀರ್ತಿಯನ್ನು ತಂದಿದ್ದಕ್ಕಾಗಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಬಿ. ಹೈoದವಿ ಮಧುಸೂಧನ ಗುಪ್ತಾಜೀ ಹಾಗೂ ಮುಖ್ಯಸ್ಥರಾದ ಬಿ. ಕಿಶೋರ ಕುಮಾರ ಹಾಗೂ ಪದಾಧಿಕಾರಿಗಳು ಜೊತೆಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವೀರಭದ್ರಯ್ಯ ಹಿರೇಮಠ ಉಪನ್ಯಾಸಕ ವೃಂದದವರ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *