ಮುದ್ದೇಬಿಹಾಳ: ಮುದ್ದೇಬಿಹಾಳ ಬಸವ ಇಂಟರ್ನ್ಯಾಷನಲ್ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿ ಕುಮಾರ್ ಮೊಮ್ಮದ್ ಜಿಶಾನ್ ಸೂರಜ್ ರಿಸಾಲ್ದಾರ್ ಇವರು ಕರ್ನಾಟಕ ರಾಜ್ಯದ ಪರವಾಗಿ ಗೋವಾ ರಾಜ್ಯದಲ್ಲಿ ಯುಥ್ ಗೇಮ್ಸ್ ಇಂಡಿಯಾ ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ಅಂಡರ್ 10 ನಲ್ಲಿ ಅಥ್ಲೇಟಿಕ್ ಸ್ಪರ್ಧೆ 100 ಮೀಟರ್ ಓಟದಲ್ಲಿ 15 ಸೆಕೆಂಡ್ ನಲ್ಲಿ ಓಟವನ್ನು ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಪರವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊಹಮ್ಮದ್ ಜಿಶಾನ್ ಸೂರಜ್ ರಿಸಾಲ್ದಾರ್ ಈಗ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಮುಂದೆ ನೇಪಾಳದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತಪರವಾಗಿ ಜೀಶಾನ್ ಪ್ರತಿನಿಧಿಸಲಿದ್ದಾರೆ. ಅಲ್ಲಿ ಏಷಿಯಾ ಖಂಡದ ಎಲ್ಲಾ ರಾಷ್ಟ್ರಗಳು ಭಾಗವಹಿಸುತ್ತಿದ್ದು, ಅಲ್ಲಿಯೂ ಕೂಡ ಜಿಶಾನ್ ಗೆಲುವು ಸಾಧಿಸಲಿ ಎಂದು ನಗರದ ಜನತೆ ಹಾರೈಸಿದ್ದಾರೆ. ಹಾಗೂ
ಇವರನ್ನು ಮುದ್ದೇಬಿಹಾಳ ಟೈಮ್ ಪತ್ರಿಕೆ ಬಳಗ ಮತ್ತು ಕರ್ನಾಟಕ ಮುಸ್ಲಿಂ ಕೌನ್ಸಿಲ್ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಅಭಿನಂದಿಸಿವೆ.
ಇನ್ನು ಯೂಥ್ ಗೇಮ್ಸ್ ಕೌನ್ಸಿಲ್ ಇಂಡಿಯಾ ಆಯೋಜಿಸಿರುವ ಈ ಕ್ರೀಡಾಕೂಟ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಮುಂದೆ ಎಪ್ರಿಲ್ ಅಥವಾ ಮೇ. ತಿಂಗಳಲ್ಲಿ ನೆರೆ ರಾಷ್ಟ್ರ ನೇಪಾಳದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳು ನಡೆಯಲಿವೆ. ಈಗಾಗಲೇ ರಾಷ್ಟ್ರೀಯಮಟ್ಟದಲ್ಲಿ ಕರ್ನಾಟಕ ಪರವಾಗಿ ಭಾಗವಹಿಸಿ ಗೋಲ್ಡ್ ಮೆಡಲ್ ಪಡೆದುಕೊಂಡಿರುವ ಜೀಶಾನ್ ಮುಂದೆ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲಿಯೂ ಕೂಡ ಗೆಲವು ಸಾಧಿಸಿ ಕರ್ನಾಟಕದ ಕೀರ್ತಿ ಬೆಳಗಿಸಲಿ ಎಂದು ನಗರದ ಜನತೆ ಮತ್ತು ಅವರ ಕುಟುಂಬಸ್ಥರು, ಸಂಬಂಧಿಕರು ಶುಭ ಹಾರೈಸಿದ್ದಾರೆ. ಅದೇ ರೀತಿ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ ಬಸವ ಇಂಟರ್ನ್ಯಾಷನಲ್ ಸ್ಕೂಲ್ ಸಿಬಿಎಸ್‌ಸಿ ಈ ಶಾಲೆಯ ಪ್ರಿನ್ಸಿಪಾಲ್ ಪ್ರಭಾ ಚಿನಿವಾರ, ಶಾಲೆಯ ಚೇರ್ಮನರಾದ ಶಿವುಕುಮಾರ ಹರ್ಲಾಪುರ ಮತ್ತು ಸಿಬ್ಬಂದಿ ವರ್ಗ ಹಾಗೂ ಶಾಲೆಯ ದೈಹಿಕ ಶಿಕ್ಷಕರು ಹಾಗು ಕೋಚರ್ ಆದ ಸಿದ್ರಾಮ ಲಕ್ಷ್ಮಣ ಭಜಂತ್ರಿ ಗುರುಗಳಿಗೂ ಸಹ ನಗರದ ಸಾರ್ವಜನಿಕರು, ಜೀಶಾನ್ ಕುಟುಂಬಸ್ಥರು, ಸಂಬಂಧಿಕರು ಅಭಿನಂದಿಸಿದ್ದಾರೆ

