ತಾಳಿಕೋಟೆ: ಪಟ್ಟಣದ ಕನ್ನಡ ಸಂಘದ ಕಾರ್ಯಾಲಯಕ್ಕೆ ಬೇಟಿ ನೀಡಿದ ಬೆಂಗಳೂರಿನ ತೆರಿಗೆ ತಜ್ಞ, ಸೃಜನಶೀಲ ಚಿಂತಕ ಡಿ. ಕಿರಣಕುಮಾರ ಅವರನ್ನು ಕನ್ನಡ ಸಂಘದ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ಸಹಕಾರ್ಯದರ್ಶಿ ಎ.ಎಂ.ಮೂಲಿಮನಿ, ದಿನಕರ ಜೋಶಿ, ಬಸನಗೌಡ ಪಾಟೀಲ, ಲೆಕ್ಕ ಪರಿಶೋಧಕ ಗಿರಿರಾಜ ಕನಕಗಿರಿ ಇದ್ದರು.

