ತಾಳಿಕೋಟಿ: ಸಾರಿಗೆ ನಿಗಮದಲ್ಲಿ ಕೆಲಸ ಮಾಡುವ ಚಾಲಕರು ನಿಗಮದ ಆರ್ಥಿಕತೆಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ ಅವರ ಸೇವೆ ಅನನ್ಯವಾಗಿದೆ ಎಂದು ಘಟಕ ವ್ಯವಸ್ಥಾಪಕ ಪಿ.ಕೆ.ಜಾಧವ ಹೇಳಿದರು. ಶನಿವಾರ ಅಂತರಾಷ್ಟ್ರೀಯ ಚಾಲಕರ ದಿನಾಚರಣೆ ಅಂಗವಾಗಿ ಸ್ಥಳೀಯ ಸಾರಿಗೆ ಘಟಕ ಹಾಗೂ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಚಾಲಕರು ತಮ್ಮ ಜೀವದ ಹಂಗು ತೊರೆದು ಪ್ರಯಾಣಿಕರ ಸುರಕ್ಷತೆಗಾಗಿ ಕೆಲಸ ಮಾಡುತ್ತಾರೆ ಇದು ಸಂತೋಷದ ವಿಷಯ ಆದರೆ ಅವರು ತಮ್ಮ ಜೀವ ಹಾಗೂ ಆರೋಗ್ಯದ ಕುರಿತೂ ಹೆಚ್ಚು ಕಾಳಜಿ ವಹಿಸಬೇಕು. ಎಲ್ಲಾ ಒತ್ತಡಗಳಿಂದ ಮುಕ್ತರಾಗಿ ಎಚ್ಚರಿಕೆ ಹಾಗೂ ಸ್ವಯಂದಿಂದ ಚಾಲನೆ ಮಾಡಬೇಕು ಎಂದು ಸಲಹೆ ನೀಡಿದರು. ಲೆಕ್ಕ ಪತ್ರ ಅಧಿಕಾರಿ ಮಹಾಂತೇಶ ಕರಾಳೆ ಮಾತನಾಡಿ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಕರು ಹಗಲು ರಾತ್ರಿ ಎನ್ನದೆ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದಾರೆ ಅವರ ಈ ಸೇವೆಯ ಸ್ಮರಣೆಗಾಗಿಯೇ ಈ ದಿನವನ್ನು ಆಚರಿಸಲಾಗುತ್ತದೆ ಎಂದರು. ಪೀರಾಪೂರ ಪಿ.ಎಚ್.ಸಿ.ಆರೋಗ್ಯಾ ಧಿಕಾರಿ ಅಕ್ಷತಾ ವಂದಾಲ ಹಾಗೂ ವಿದ್ಯಾರ್ಥಿ ಅಮೂಲ ದ್ಯಾಪೂರ ಮಾತನಾಡಿ ಇವತ್ತು ನಾವು ನಮ್ಮ ಶಿಕ್ಷಣ ಮತ್ತು ಕರ್ತವ್ಯವನ್ನು ಸರಿಯಾದ ಸಮಯಕ್ಕೆ ನಿರ್ವಹಿಸುತಿದ್ದೇವೆ ಎಂದಾದರೆ ಅದು ಚಾಲಕರ ಸೇವೆಯ ಕಾಳಜಿಯಿಂದಾಗಿ, ಭಗವಂತ ಅವರಿಗೆ ಐಶ್ವರ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದರು. ಇದೇ ಸಂದರ್ಭದಲ್ಲಿ ಸಾರಿಗೆ ಘಟಕ ಹಾಗೂ ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ವರ್ಗ, ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಂದ ಚಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾರಿಗೆ ನೌಕರ ಸಂಘದ ಅಧ್ಯಕ್ಷ ಕುಮಾರ ಅಸ್ಕಿ, ವಿಭಾಗೀಯ ಉಪಾಧ್ಯಕ್ಷ ಜಿ.ಜಿ.ಬಿರಾದಾರ,ಎಸ್ಸಿ,ಎಸ್‌ಟಿ.ನೌಕರ ಸಂಘದ ಅಧ್ಯಕ್ಷ ಮರೇಪ್ಪ ಚಲವಾದಿ,ಎಎಸ್ಐ ಚಂದ್ರಶೇಖರ ಭಂಗಿ, ಸಾರಿಗೆ ಸಿಬ್ಬಂದಿಗಳಾದ ನಿಂಗನಗೌಡ ಬಿರಾದಾರ,ಶಿವಾನಂದ ಬಿ.ಎಚ್.ಕನಕಪ್ಪ ಓಲೇಕಾರ, ಬಸನಗೌಡ ಚೋಕಾವಿ, ದಾವಲಸಾಬ ನದಾಫ, ಶಿವಾನಂದ ಹೊಸಮನಿ, ಬಸನಗೌಡ,ಅಸ್ಕಿ, ಶರಣಗೌಡ ಲಿಂಗದಳ್ಳಿ, ಸಾಹೇಬ ಪಟೇಲ ಅಸ್ಕಿ,ಅಂಬರೀಶ ಮೇಟಿ, ಪ್ರಕಾಶ ಪಾಟೀಲ, ಮಹಾಂತಗೌಡ ಬಿರಾದಾರ,ಚಂದ್ರಕಲಾ ಮೇಟಿ, ಪ್ರತಿಭಾ ಹಜೇರಿ,ಶರಣಮ್ಮ ಅರೆನಾಡ,ಯೂನಿಯನ್ ಪದಾಧಿಕಾರಿಗಳು ಹಾಗೂ ಪ್ರಯಾಣಿಕರು ಇದ್ದರು.

