ಮಸ್ಕಿ,ಜ,22:- ಗಣರಾಜ್ಯೋತ್ಸವದ ಅಂಗವಾಗಿ ಜನವರಿ 26 ರಂದು ಮಸ್ಕಿಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಜನವರಿ 26 ರ ಸಂಜೆ ಆರು ಗಂಟೆಗೆ, ಮಸ್ಕಿಯ ಭ್ರಮರಾಂಬ ದೇವಸ್ಥಾನದಲ್ಲಿ,
ಮಸ್ಕಿ ತಾಲೂಕಾಡಳಿತ, ತಾಲೂಕಾ ಪಂಚಾಯ್ತಿ ಮಸ್ಕಿ ಹಾಗೂ ಪುರಸಭೆ ಮಸ್ಕಿಯ ಸಹಯೋಗದಲ್ಲಿ
ರಂಗಚೇತನ ಕಲಾ ತಂಡದಿಂದ ‘ರಮಾಬಾಯಿ ಅಂಬೇಡ್ಕರ್’ ನಾಟಕ ಪ್ರದರ್ಶನ ನಡೆಯಲಿದೆ.
ಈ ನಾಟಕವು ರಮಾಬಾಯಿ ಅಂಬೇಡ್ಕರ್ ಅವರ ಜೀವನ, ಹೋರಾಟ, ಸಾಮಾಜಿಕ ಚಿಂತನೆ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ.
ಕಾರಣ ತಾಲೂಕಿನ ಸಾರ್ವಜನಿಕರು, ಯುವಜನತೆ, ವಿದ್ಯಾರ್ಥಿಗಳು, ಪ್ರಗತಿಪರ ಚಿಂತಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,
ನಾಟಕದ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.
ಈ ಕುರಿತು ಮಸ್ಕಿಯ ನಿರೀಕ್ಷಣಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ
ಹಿರಿಯ ದಲಿತ ಸಾಹಿತಿಗಳು ಹಾಗೂ ಸಂಘಟಕರಾದ ದಾನಪ್ಪ ಸಿ. ನಿಲೋಗಲ್
ಮತ್ತು ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯರಾದ ದೊಡ್ಡಪ್ಪ ಮುರಾರಿಯವರು
ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಗಣರಾಜ್ಯೋತ್ಸವದ ದಿನ ಸಮಾಜ ಪರಿವರ್ತನೆಯ ಸಂದೇಶ ಹೊತ್ತ ಈ ನಾಟಕವನ್ನು ತಪ್ಪದೇ ವೀಕ್ಷಿಸಬೇಕೆಂದು ಅವರು ತಿಳಿಸಿದ್ದಾರೆ.
ವರದಿ : ಸುರೇಶ ಬಳಗಾನೂರು
