ಸಿಂಧನೂರು : ಹೋಲಿ ಫ್ಯಾಮಿಲಿ ಚರ್ಚಿನ ಪವಿತ್ರ ಕುಟುಂಬ ದೇವಾಲಯದ ವಾರ್ಷಿಕ ಹಬ್ಬವನ್ನು ಭಕ್ತಿಭಾವ ಹಾಗೂ ಶಾಂತಿಯೊಂದಿಗೆ ಆಚರಿಸಲಾಯಿತು. ಹಬ್ಬದ ಅಂಗವಾಗಿ ಇಂದು ಸಿಂಧನೂರು ನಗರದ ಪ್ರಮುಖ ಬೀದಿಗಳಲ್ಲಿ ಪವಿತ್ರ ಕುಟುಂಬವಾದ ಕ್ರಿಸ್ತ ಯೇಸು, ಸಂತ ಜೋಸೆಫ್ ಹಾಗೂ ಮಾತೆ ಮರಿಯಾ ತೇರ ಅವರ ಪ್ರತಿಮೆಗಳೊಂದಿಗೆ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಭಕ್ತರು ಭಜನೆಗಳು, ಪ್ರಾರ್ಥನೆಗಳು ಹಾಗೂ ಧಾರ್ಮಿಕ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಮೆರವಣಿಗೆಯ ನಂತರ ಹಬ್ಬದ ವಿಶೇಷ ದಿವ್ಯ ಬಲಿ ಪೂಜೆಯನ್ನು ರೆಬೆಲ್ ಫಾದರ್ ಸಾಯಿ ಪ್ರಶಾಂತ್ ಅವರು ಭಕ್ತಿಪೂರ್ಣವಾಗಿ ನೆರವೇರಿಸಿದರು. ಈ ಪೂಜೆಗೆ ಸಿಂಧನೂರು ವಲಯದ ಶ್ರೇಷ್ಠ ಗುರುಗಳಾದ ಫಾದರ್ ಜ್ಞಾನಪ್ರಕಾಶ್ ಅವರು ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಸಿಂಧನೂರು ತಾಲೂಕು ಸೇರಿದಂತೆ ಬಳ್ಳಾರಿ ಧರ್ಮಪ್ರಾಂತ್ಯದ ಅನೇಕ ಗುರುಗಳು ಉಪಸ್ಥಿತರಿದ್ದು ಸಂಯುಕ್ತವಾಗಿ ಪೂಜೆಯನ್ನು ಅರ್ಪಿಸಿದರು.

ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನಾ ವಿಧಿಗಳು, ಭಕ್ತಿಗೀತೆಗಳ ಗಾಯನ, ಕುಟುಂಬಗಳಿಗಾಗಿ ಆಶೀರ್ವಚನ ಪ್ರಾರ್ಥನೆ ಹಾಗೂ ಸಮರ್ಪಣಾ ಭಕ್ತಿ ಕಾರ್ಯಗಳನ್ನು ನಡೆಸಲಾಯಿತು. ಪೂಜೆಯ ಅಂತ್ಯದಲ್ಲಿ ಭಕ್ತರಿಗೆ ಪವಿತ್ರ ಪ್ರಸಾದವನ್ನು ವಿತರಿಸಲಾಯಿತು.

ಈ ಹಬ್ಬದ ಆಚರಣೆ ಕ್ರೈಸ್ತ ಸಮುದಾಯದಲ್ಲಿ ಆಧ್ಯಾತ್ಮಿಕ ಜಾಗೃತಿ, ಕುಟುಂಬ ಮೌಲ್ಯಗಳ ಬಲವರ್ಧನೆ ಮತ್ತು ಸಹೋದರತ್ವದ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು

Leave a Reply

Your email address will not be published. Required fields are marked *