ಪ್ರತಿಷ್ಠಿತ ಫೆಡರಲ್ ಶಿಕ್ಷಣ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ
ಯರಮರಸ ಕ್ಯಾಂಪ್‌ನಲ್ಲಿರುವ ಪ್ರತಿಷ್ಠಿತ ಫೆಡರಲ್ ಶಿಕ್ಷಣ ಸಂಸ್ಥೆಯ ಸಮೂಹಗಳ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ರಿಮ್ಸ್ ವೈದ್ಯಕೀಯ ಕಾಲೇಜು, ರಾಯಚೂರುನ ಮುಖ್ಯಸ್ಥರು ಹಾಗೂ ನಿರ್ದೇಶಕರಾದ ಶ್ರೀ ಡಾ. ರಮೇಶ ಬಿ.ಎಚ್. ಮತ್ತು ಮಾಜಿ ನಗರಸಭೆ ಸದಸ್ಯರಾದ ಶ್ರೀ ಎಂ.ಕೆ. ಬಾಬರ್ ಸಾಬ್ ಅವರು ನೆರವೇರಿಸಿದರು.
ನಂತರ ಮಾತನಾಡಿದ ಶ್ರೀ ಡಾ. ರಮೇಶ ಬಿ.ಎಚ್. ಅವರು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡು, ಪಾಲಕರು ಮಕ್ಕಳನ್ನು ಅತಿಯಾಗಿ ಮೊಬೈಲ್ ಬಳಕೆಯಿಂದ ದೂರವಿಟ್ಟು, ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಜೊತೆಗೆ ಗಣರಾಜ್ಯೋತ್ಸವದ ಮಹತ್ವ ಮತ್ತು ಅದರ ಮೌಲ್ಯಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.
ಸಂಸ್ಥೆಯ ಅಧ್ಯಕ್ಷರಾದ ಮಹ್ಮದ್ ಅಬ್ದುಲ್ ಹೈ ಫೀರೋಜ್ ಅವರು ಮಾತನಾಡಿ, ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಅತ್ಯಂತ ಮುಖ್ಯವೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕಿ ಕು. ಶ್ರೀಲೇಖಾ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾದ ಶ್ರೀ ಎಂ.ಡಿ. ನೌಶದ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸ್ನೇಹ ಪ್ರಿಯಾ ಹಾಗೂ ಶ್ರೀಮತಿ ಹಬೀಬಾ ಅವರು ನಡೆಸಿಕೊಟ್ಟರೆ, ವಂದನಾರ್ಪಣೆಯನ್ನು ಶ್ರೀಮತಿ ಫರೀನ ಸುಲ್ತಾನಾ ಅವರು ಸಲ್ಲಿಸಿದರು
