ರಾಯಚೂರು- ಜ. 22 : ಇತ್ತಿಚೀಗೆ ಸಹಕಾರ ಸಚಿವಾಲಯ ಆರಂಭವಾಗಿ ಪಾರದರ್ಶಕವಾಗಿ ಚುನಾವಣೆ ನಡೆಸಲು ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಿಗೆ ಚುನಾವಣೆಯ ಬಗ್ಗೆ ತರಬೇತಿ ಅಗತ್ಯವಿದ್ದುದರಿಂದ ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟದಿಂದ ಈ ಒಂದು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯದರ್ಶಿಗಳು ತರಬೇತಿ ಪ್ರಯೋಜನ ಪಡೆಯುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕ ಶೇಖ್ ಹುಸೇನ್ ತಿಳಿಸಿದರು.
ಅವರು ನಗರದ ಜೆ.ಸಿ. ಭವನ, ರಾಯಚೂರುದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ, ರಾಯಚೂರು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಸಹಕಾರ ಚುನಾವಣಾ ಪ್ರಾಧಿಕಾರ, ಸಹಕಾರ ಇಲಾಖೆ ಹಾಗೂ ರಾಯಚೂರು ಜಿಲ್ಲೆಯಲ್ಲಿ ಚುನಾವಣೆಗೆ ಬಾಕಿ ಇರುವ ವಿವಿಧ ಸಹಕಾರ ಸಂಘಗಳು ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ “ಸಹಕಾರ ಸಂಘಗಳ ಆಡಳಿತ ಮಂಡಳಿ ಚುನಾವಣೆ ಸಂಬಂಧ ಚುನಾವಣಾಧಿಕಾರಿ, ಪರಿಶೀಲನಾಧಿಕಾರಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಚುನಾವಣೆ ಕುರಿತ ವಿಶೇಷ ಕಾರ್ಯಕ್ರಮ” ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಎನ್. ಭೀಮರೆಡ್ಡಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಲಿಯಾಖತ್ ಅಲಿ ನಿವೃತ್ತ ಸಹಕಾರ ಸಹಾಯಕ ನಿಬಂಧಕರು, ಹೊಸಪೇಟೆ ಇವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಸಿದ್ದಣ್ಣ ಸಹಕಾರ ಮಾರಾಟಾಧಿಕಾರಿ, ಸಹಕಾರ ಇಲಾಖೆ ರಾಯಚೂರು ಮಾತನಾಡಿ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಚುನಾವಣಾಧಿಕಾರಿಗಳು ಜವಾಬ್ದಾರಿಯಿಂದ ಚುನಾವಣೆ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಸಂಪನ್ಮೂಲ ವ್ಯಕ್ತಿಗಳು ತಿಳಿಸುವ ಕಾನೂನು ಅಂಶಗಳ ಸಲಹೆ ಪಡೆಯುವಂತೆ ತಿಳಿಸಿದರು.
ಸಂನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಲಿಯಾಖತ್ ಅಲಿ ನಿವೃತ್ತ ಸಹಕಾರ ಸಹಾಯಕ ನಿಬಂಧಕರು, ಹೊಸಪೇಟೆ ಇವರು ತಮ್ಮ ಉಪನ್ಯಾಸದಲ್ಲಿ ಸಹಕಾರ ಸಂಘಗಳ ಕಾಯ್ದೆ ೧೯೫೯ಕ್ಕೆ ತಿದ್ದುಪಡಿಗಳಾಗಿ ಸಹಕಾರ ಕ್ಷೇತ್ರದಲ್ಲಿ ಅನೇಕ ಮಹತ್ವದ ಬದಲಾವಣೆಯಾದ ಬಗ್ಗೆ ತಿಳಿಸಿ, ಈಗ ಸಹಕಾರ ಚುನಾವಣಾ ಪ್ರಾಧಿಕಾರದ ನಿರ್ದೇಶನ ಮತ್ತು ನಿಬಂಧನೆಗಳ ಪ್ರಕಾರ ಚುನಾವಣಾ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಅದಕ್ಕಾಗಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ಪರಿಶೀಲನಾಧಿಕಾರಿ ಹಾಗೂ ಚುನಾವಣಾಧಿಕಾರಿಗಳ ಕರ್ತವ್ಯಗಳು, ಸಹಕಾರ ಚುನಾವಣೆಯಲ್ಲಿ ಅನುಸರಿಸಬೇಕಾದ ಮಹತ್ವದ ಕ್ರಮಗಳ ಕುರಿತು, ಚುನಾವಣೆಯ ವಿವಿಧ ರೂಪರೇಷೆಗಳಾದ ಮತದಾರ ಪಟ್ಟಿ ತಯಾರಿಕೆ, ನಾಮಪತ್ರ ಸ್ವೀಕೃತಿ, ಪರಿಶೀಲನೆ, ಮತ ಎಣೆಕೆ ಹೀಗೆ ಪ್ರತಿಯೊಂದು ಹಂತದಲ್ಲಿಯೂ ಚುನಾವಣಾಧಿಕಾರಿಗಳು ಜವಬ್ದಾರಿ ಹಾಗೂ ಜಾಗರೂಕತೆಯಿಂದ ಕರ್ತವ್ಯನಿರ್ವಹಿಸುವಂತೆ ತಿಳಿಸಿದರು.
ಪ್ರಾರಂಭದಲ್ಲಿ ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟದ ಶ್ರೀಮತಿ ಮಂಜುಳಾ ಸರ್ವರನ್ನು ಸ್ವಾಗತಿಸಿದರು. ಗಾಯತ್ರಿ ವೈ. ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಸಹಕಾರ ಒಕ್ಕೂಟ ರಾಯಚೂರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು|| ಅಶ್ವಿನಿ ಕೆ. ಜಿಲ್ಲಾ ಸಹಕಾರ ಶಿಕ್ಷಕರು ರಾಯಚೂರು ನಿರೂಪಿಸಿ, ಒಕ್ಕೂಟದ ವ್ಯವಸ್ಥಾಪಕ ಮಲ್ಲಿಕಾರ್ಜುನ ಎಂ. ಅಮ್ಮಿನಭಾವಿ ವಂದಿಸಿದರು.
ತರಬೇತಿಯಲ್ಲಿ ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಚುನಾವಣೆಗೆ ಬಾಕಿ ಇರುವ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರು, ಕಾರ್ಯದರ್ಶಿಗಳು ಹಾಗೂ ನಿಯೋಜನೆಗೊಂಡ ರಿಟರ್ನಿಂಗ್ ಅಧಿಕಾರಿಗಳು ಭಾಗವಹಿಸಿ, ಚುನಾವಣೆಗೆ ಸಂಬಂಧಿಸಿದ ಸಂಶಯ ಮತ್ತು ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರ ಪಡೆದುಕೊಂಡು, ಜಿಲ್ಲಾ ಸಹಕಾರ ಒಕ್ಕೂಟ ಆಯೋಜಿಸಿದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

Leave a Reply

Your email address will not be published. Required fields are marked *