ಸಿಂಧನೂರು : ನಗರದ ಪಿಎಂ ಶ್ರೀ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಕಾಲಪೇಟೆ ಯಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಮಾಡಲಾಯಿತು. ಹೊನ್ನೂರು ಕಟ್ಟಿಮನಿ ಅಧ್ಯಕ್ಷರು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ.ಇವರು ಮಾತನಾಡಿ. 1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿತು ತದನಂತರ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಭಾರತದ ಸಂವಿಧಾನ ಬರೆದರು ಎಂದು ಹೆಳಿದರು ಅವರಿಂದು ಪಿಎಂ ಶ್ರೀ ಶಾಲೆ ಸುಕಾಲಪೇಟೆ ಯಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸಂವಿಧಾನ ದಲ್ಲಿ ನ್ಯಾಯಾಂಗ ಶಾಸಕಾಂಗ ಕಾರ್ಯಾಂಗ ಗಳಿದ್ದು ನಾವು ಕಾನೂನು ಗೌರವಿಸಬೇಕು.
ನ್ಯಾಯ ಸ್ವಾತಂತ್ರ್ಯ ಸಮಾನತೆ ಭಾತೃತ್ವ ಹೊಂದಿದೆ ಪ್ರಜಾಪ್ರಭುತ್ವ ನಮ್ಮ ದೇಶವಾಗಿದೆ.ನಮ್ಮ ಶಾಲೆಯ 26 ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದು ಬಹಳ ಸಂತೋಷವಾಗಿದೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಮಕ್ಕಳು ಸರಿಯಾಗಿ ವಿದ್ಯಾಭ್ಯಾಸ ಮಾಡಿ ನಮ್ಮಶಾಲೆಗೆ ಮತ್ತು ದೇಶಕ್ಕೆ ಕೀರ್ತಿ ತರಬೇಕೆಂದು ಹೇಳಿದರು. ಭಾಷಣ ಮಾಡಿದ 26 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಜಿ ಗುರುಬಸಯ್ಯ ಮುಖ್ಯ ಗುರುಗಳು. ಹೊನ್ನೂರು ಕಟ್ಟಿಮನಿ ಅಧ್ಯಕ್ಷರು ಎಸ್‌ಡಿಎಂಸಿ. ನೇತ್ರಾವತಿ ಬಸವರಾಜ್ ವಿಶ್ವಕರ್ಮ ಉಪಾಧ್ಯಕ್ಷರು ಎಸ್ ಡಿ ಎಂ ಸಿ.ಶ್ರೀಮತಿ ಗೀತಾ,ರಮೇಶ್, ಹುಸೇನ್ ಸಾಬ್,ವೆಂಕಟೇಶ್,ಸದಸ್ಯರು ಎಸ್ ಡಿ ಎಂ ಸಿ. ಶ್ರೀ ವೆಂಕನಗೌಡ ಸಹ ಶಿಕ್ಷಕರು ಪ್ರಾಸ್ತಾವಿಕ ನುಡಿ ಹೇಳಿದರು. ಶ್ರೀಮತಿ ಸುಧಾ ಎನ್ ಉಳ್ಳಿ ಮೇಡಂ ನಿರೂಪಣೆ ಮಾಡಿದರು. ಶ್ರೀಮತಿ ಹುಲಿಗೆಮ್ಮ ಮೇಡಂ ಸ್ವಾಗತ ಕೋರಿದರು. ಶ್ರೀಮತಿ ಅಂಬಮ್ಮ ಮೇಡಂ ಹಿರಿಯ ಶಿಕ್ಷಕಿ . ಶ್ರೀಮತಿ ಮುದುಕಮ್ಮ ಮೇಡಂ ವಂದನಾರ್ಪಣೆ ಮಾಡಿದರು.
ಶ್ರೀಮತಿ ಪದ್ಮಾವತಿ ಅತಿಥಿ ಶಿಕ್ಷಕಿ. ಕುಮಾರಿ ಮಮತಾ ಎಲ್ ಕೆ ಜಿ ಅತಿಥಿ ಶಿಕ್ಷಕಿ. ಶ್ರೀ ವಿಜಯಕುಮಾರ್ ಸಂಗೀತ ಅತಿಥಿ ಶಿಕ್ಷಕರು. ಶ್ರೀ ಶೇಖರಪ್ಪ ದೈಹಿಕ ಶಿಕ್ಷಕರು. ಶಾಲಾ ಸಿಬ್ಬಂದಿ ವರ್ಗ ಮತ್ತು ಮುದ್ದು ಮಕ್ಕಳು ಭಾಗವಹಿಸಿದ್ದರು.


