ಲಿಂಗಸೂರು : ನ 22 – ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ನವಜಾತ ಶಿಶು ಆರೈಕೆ ಸಪ್ತಾಹ ಕಾರ್ಯಕ್ರಮ ಜರುಗಿತು .
ಸರ್ಕಾರಿ ಆಸ್ಪತ್ರೆ ಮಕ್ಕಳ ತಜ್ಞ ಡಾ. ಸಂಜೀವ ರೆಡ್ಡಿ ಮಾತನಾಡಿ ನವಜಾತ ಶಿಶು ಆರೈಕೆಯಲ್ಲಿ ಎದೆ ಹಾಲು ಉಣಿಸುವಿಕೆ ಮತ್ತು ಕಾಂಗರು ಮದರ್ ಕೇರ್ ನಿಂದ ಶಿಶುವಿನ ಮರಣ ಪ್ರಮಾಣ ತಡೆಗಟ್ಟುವುದು ಹಾಗೂ ಆರೋಗ್ಯವಂತ ಮಗು ಬೆಳವಣಿಗೆಗೆ ಸಹಕಾರಿಯಾಗಿದೆ. ತಾಯಂದಿರು ಗರ್ಭಿಣಿಯರಿಗೆ ಹುಟ್ಟಿದ ಮಕ್ಕಳ ಸಮಗ್ರ ಆರೈಕೆ ಮಾಡುವುದು ಅಗತ್ಯವೆಂದು ಹೇಳಿದರು.
ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್ ಜೋಶಿ ಒಂದು ವರ್ಷದೊಳಗಿನ ಮಗುವಿಗೆ ಹಾಕಬೇಕಾದ ಲಸಿಕೆಗಳ ಮಹತ್ವದ ಕುರಿತು ಜಾಗೃತಿ ಮೂಡಿಸಿದರು ಬಳಿಕ ಮಗುವನ್ನು ಬೆಚ್ಚಗಿಡುವ ಕಾಂಗರು ಮದರ್ ಕೇರ್ ವಿಧಾನಗಳನ್ನು ಪ್ರತ್ಯಕ್ಷಿಕೆ ಮೂಲಕ ಶುಶ್ರೂಷಕ ಅಧಿಕಾರಿ ಮರ್ಲಿನಾ, ಪ್ರೇಮ, ಹನುಮಂತರಾಯ ವಿವರಿಸಿದರು.
ಕಾರ್ಯಕ್ರಮ ವ್ಯವಸ್ಥಾಪಕಿ ಶಿವಲೀಲಾ ಮೇಟಿ ,ಅಕೌಂಟ್ ಮ್ಯಾನೇಜರ್ ಪದ್ಮಾವತಿ, ಆಪ್ತ ಸಮಾಲೋಚಗಿ ರೋಸ್ ಮೇರಿ ಸೇರಿದಂತೆ ಆಶಾ ಕಾರಸೇರಿದಂತೆ ಭಾಗವಹಿಸಿದ್ದರು

