ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ತಹಶೀಲ್ದಾರ್ ರವರಿಗೆ ಗ್ರೇಡ್-2 ತಹಶೀಲ್ದಾರ್ ರವರ ಮೂಲಕ ಮನವಿ ಸಲ್ಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷರಾದ ಹನುಮೇಶನಾಯಕ ಮಾತನಾಡಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಭೂರಹಿತ ಕೃಷಿ ಕಾರ್ಮಿಕರಿಗೆ ವಾಲ್ಮೀಕಿ ಅಭಿವೃದ್ದಿ ನಿಗಮ ರಾಯಚೂರು ರವರು 19/*/1 ರಲ್ಲಿ ಭೂಮಿಯನ್ನು ಖರೀದಿಸಿ 2016 -17 ರಲ್ಲಿ ಫಲಾನುಭವಿಗಳಿಗೆ ಜಮೀನುಗಳನ್ನು ಹಂಚಿಕೆ ಮಾಡಲಾಗಿದೆ ಅದ್ದರೆ ರೈತರು ಜಮೀನಿಗೆ ಹೋಗುವುದಕ್ಕೆ ರಸ್ತೆ ಇಲ್ಲಾದೆ ಇರುವುದರಿಂದ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಕೂಡಲೇ ತಾಲೂಕು ಅಡಳಿತದಿಂದ ಪರಿಶೀಲಿಸಿ ರೈತರ ಜಮೀನುಗಳಿಗೆ ರಸ್ತೆ ಸೌಕರ್ಯ ಕಲ್ಪಿಸಿಕೊಡುವಂತೆ ಕೋರಿದರು.ಹಾಗೂ ಅತಿವೃಷ್ಟಿಯಿಂದ ಬೆಳೆಹಾನಿಯಾಗಿರುವ ರೈತರಿಗೆ ಶೀಘ್ರವೇ ಪರಿಹಾರ ಕಲ್ಪಿಸುವಂತೆ ಕೋರಿದರು.
ತಾ.ಉಪಾಧ್ಯಕ್ಷರಾದ ದಾಹುದ್, ಬಜ್ಜಯ್ಯನಾಯಕ, ಪ್ರ.ಕಾರ್ಯದರ್ಶಿ ವೆಂಕಟೇಶನಾಯಕ, ಸೈಫೀಲ್.ಮೈಬೂಬ್.ಚಾಂದ್ ಪಾಷಾ, ಶಿವಶಂಕರ ನಯಾಕ್, ಕರಿಂಸಾಬ್, ಫಕೀರಮ್ಮ, ರಾಚಮ್ಮ, ಹನುಮಂತ.ದೇವಮ್ಮ,ಲಕ್ಷ್ಮಿ,ಬಸವರಾಜ,ಮಲ್ಲಯ್ಯ,ಏಕದಂತ ಸೇರಿದಂತೆ ಇನ್ನಿತರರು ಇದ್ದರು.
ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.

