ಮಸ್ಕಿ: ರಾಯಚೂರಿನಲ್ಲಿ ನಡೆಯಲಿರುವು ರಾಯಚೂರು ಉತ್ಸವ 2026ರ ಮುಖ್ಯ ವೇದಿಕೆಗೆ ಅಮರಶಿಲ್ಪಿ ಜಕಣಾಚಾರಿ ಹೆಸರಿಡಲು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಯುವ ಘಟಕ ಮತ್ತು ವಿಶ್ವಕರ್ಮ ಸಮಾಜದಿಂದ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಗ್ರೇಡ್-೨ ತಹಸೀಲ್ದಾರ್ ಮೂಲಕ ಮನವಿ ಪತ್ರ ರವಾನಿಸಿದ್ದಾರೆ.
ನಂತರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಯುವ ಘಟಕದ ಅಧ್ಯಕ್ಷ ವಿಜಯಕುಮಾರ ಮಾತನಾಡಿ ಫೆ.೫,೬ ಮತ್ತು ೭ ರಂದು ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ಅಮರಶಿಲ್ಪಿ ಜಕಣಾಚಾರಿ ಇವರ ಭಾವಚಿತ್ರವನ್ನು ಇಟ್ಟು ಮುಖ್ಯ ವೇಧಿಕೆಗೆ ಇವರ ಹೆಸರಿಡುವಂತೆ ಒತ್ತಾಯಿಸಿದ್ದಾರೆ. ಜಿಲ್ಲಾ ಉತ್ಸವದಲ್ಲಿ ‘ಕಲ್ಲುಗಳಲ್ಲಿ ಸುಂಧರ ಕೆತ್ತನೆಯ ಮೂಲಕ ಬೆಲೂರು ಹಳೆಬೀಡು ಇನ್ನಿತರೆ ಭಾಗದಲ್ಲಿ ಸುಂಧರ ಮಂದಿಗಳಲ್ಲಿ ಹಾಗೂ ದೇಶದ ಶಿಲ್ಪ ಕಲೆಯನ್ನು ದೇಶ ವಿದೇಶಗಳಲ್ಲಿ ತೋರಿದ ಹೆಗ್ಗಳಿಕೆಗೆ ಅಮರಶಿಲ್ಪಿ ಜಕಣಾಚಾರಿ ಹೆಸರು ವಾಸಿಯಾಗಿದ್ದು, ಈ ಹಿನ್ನೆಲೆಯಲ್ಲಿ ವೇಧಿಕೆಯಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಹಾಗೂ ವೇಧಿಕೆಯೊಂದಕ್ಕೆ ಅವರ ಹೆಸರಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಮಚಂದ್ರ ಪತ್ತಾರ, ಅಮರೇಶ ಪತ್ತಾರ, ದೇವರಾಜ ಕಂಬಾರ್. ಅಯ್ಯಪ್ಪ ಪತ್ತಾರ, ಮೌನೇಶ ಜಂಬಲದಿನ್ನಿ, ಕಾಳಪ್ಪ ಕಣ್ಣೂರು, ಬಸವಂತ ಬಡಿಗೇರ, ಗಟ್ಟೆಪ್ಪ ಬಡಿಗೇರ, ಮಲ್ಲಿಕಾರ್ಜುನ ಬಡಿಗೇರ ಹಸಮಕಲ್, ಶಿವಾನಂದ ಪತ್ತಾರ, ಶಿಶಧರ ಬಡಿಗೇರ, ಮಂಜುನಾಥ ಬುದ್ದಿನ್ನಿ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *