ಕವಿತಾಳ : `ಕರ್ನಾಟಕ ನಾಯಕರ ಒಕ್ಕೂಟ(ರಿ)ರಾಯಚೂರು ವತಿಯಿಂದ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 1೦ ದಿನಗಳ ಉಚಿತ ತರಬೇತಿಕಾರ್ಯಗಾರವನ್ನು ತಾವರಗೇರಾ ಬುದ್ದವಿಹಾರದಲ್ಲ ಇಹಮ್ಮಿಕೊಳ್ಳಲಾಗಿದ್ದು ಇದರ ಸಧುಪಯೋಗವನ್ನು ಪಡೆದುಕೊಳ್ಳುವ ಮೂಲಕ ಕಾರ್ಯಗಾರವನ್ನು ಯಶಸ್ವಿಗೊಳಿಸಬೇಕು’ ಎಂದು ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಗರುಡ ನಾಯಕ್ ರಾಯಚೂರು ತಿಳಿಸಿದ್ದಾರೆ.
`ಐಎಎಸ್, ಕೆಎಎಸ್, ಕೆಇಎಸ್, ಪಿಎಸ್‌ಐ, ಪಿಡಿಓ, ಎಫ್‌ಡಿಎ, ಎಸ್‌ಡಿಎ,ಗ್ರೂಪ್-ಸಿ, ಜಿಪಿಎಸ್‌ಟಿಆರ್, ಪೊಲೀಸ್ ಪೇದೆ ಸೇರಿದಂತೆ ಇನ್ನಿತರ ಬ್ಯಾಂಕಿಂಗ್ ಅಭ್ಯರ್ಥಿಗಳಿಗೆ ತರಬೇತಿಯನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಕೈಗೊಳ್ಳಲಾಗಿದ್ದು, ಶಿಬಿರದಲ್ಲಿ ಪ್ರತಿ ವಿಷಯವಾರು ರಾಜ್ಯದ ಹಿರಿಯ ಸಂಪನ್ಮೂಲ ವ್ಯಕ್ತಿಗಳಿಂದ ಬೋದನೆ, ಪ್ರಾಜೆಕ್ಟರ್ ವ್ಯವಸ್ಥೆ, ಸಾಧಕರೊಂದಿಗೆ ಸಂವಾದ, ಪ್ರತಿ ಭಾನುವಾರ ಓಎಮ್‌ಆರ್ ಮಾದರಿಯಲ್ಲಿ ಪರೀಕ್ಷೆಗಳು ಮತ್ತು ವಿಶ್ಲೇಷಣೆ, ಸ್ಮಾರ್ಟ್ಬೋರ್ಡ್ ಮೂಲಕ ಭೋದನೆ, ವಿದ್ಯಾರ್ಥಿಗಳಿಗೆ ವೈಫೈ ಮತ್ತು ಲೈಬ್ರೇರಿ ವ್ಯವಸ್ಥೆ, ಪ್ರತಿ ತರಗತಿಯಲ್ಲಿ ಸಿಸಿ ಕೈಆಮರಾ ಅಳವಡಿಕೆ, ಸುಸಜ್ಜಿತ ಕೊಠಡಿಗಳು, ಶುದ್ಧ ಕುಡಿಯುವ ನೀರು ಹಾಗೂ ಉಚಿತ ವಸತಿ ವ್ಯವಸ್ಥೆಯನ್ನು ಹಮ್ಮಿಕೊಳಲಾಗಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

