ಸಿಂಧನೂರು ಜನವರಿ 22: ತಾಲೂಕಿನ ಸಮೀಪದ ಸುಲ್ತಾನಪುರ ಗ್ರಾಮದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಲಸಿಕೆಯನ್ನು ನೀಡುವ ಶಿಬಿರ ಹಮ್ಮಿಕೊಳ್ಳಲಾಗಿತ್ತು
ಲಸಿಕಾ ನೀಡುವ ಶಿಬಿರದ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿದರು. ಬಿಸಿಜಿ ಲಸಿಕೆ ಬಾಲ ಕ್ಷಯವನ್ನು . ಐಪಿವಿ ಮತ್ತು ಓ ಪಿ ವಿ ಪೋಲಿಯೋ ರೋಗವನ್ನು ಹೆಪಾಟೈಟಿಸ್ ಸಿ . ಹೈಪಟೈಟಸ್ ಬಿ ರೋಗವನ್ನು. ಪೆಂಟಾವಲೆಂಟ್ . ಗಂಟಲು ಮಾರಿ ನಾಯಿ ಕೆಮ್ಮು ಧರ್ನುವಾಯು. ಹೆಚ್ ಇನ್ಫ್ಲೂನ್ಜಾ ಮತ್ತು ಹೈಪಟೈಟಸ್ ಬಿ. ಪಿಸಿವಿ ನ್ಯೂಮೋಕೊಕಲ್ ಕಾಯಿಲೆ ರೋಟಾ ಅತಿಸಾರಬೇಧಿ ವಿಟಮಿನ್ ಎಂ ಇರುಳು ಕಣ್ಣು ದಡಾರ ಮತ್ತು ರುಬೆಲಾ . ಡಿಪಿಟಿ ಗಂಟಲು ಮಾರಿ ನಾಯಿ ಕೆಮ್ಮು ಮತ್ತು ಧರ್ನುವಾಯು. ಟಿಬಿ . ಗಂಟಲು ಮಾರಿ ಧರ್ನುವಾಯು ಜೆಇ. ಮೆದುಳು ಜ್ವರ ತಡೆಗಟ್ಟುತ್ತವೆ
ಅದಕ್ಕಾಗಿ ತಾಯಿಂದಿರು ತಮ್ಮ ಮಕ್ಕಳ ಆರೋಗ್ಯ ಬೆಳವಣಿಗೆಗೆ ಬಾಲ್ಯವಸ್ಥೆಯಲ್ಲಿ ಬರಬಹುದಾದ ಖಾಯಿಲೆಗಳಿಂದ ತಪ್ಪಿಸಲು ತಪ್ಪದೇ ಲಸಿಕೆಯನ್ನು ಕಡ್ಡಾಯವಾಗಿ ಕೊಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಅಂಬಮ್ಮ ಅಂಗನವಾಡಿ ಕಾರ್ಯಕರ್ತೆಯರಾದ ಶರಣಮ್ಮ ಅಂಗನವಾಡಿ ಕೇಂದ್ರ ಒಂದು ಶರಣಮ್ಮ ಅಂಗನವಾಡಿ ಕೇಂದ್ರ ಎರಡು ಆಶಾ ಕಾರ್ಯಕರ್ತೆ ಶಿವಮ್ಮ ಹಾಗೂ ಮಕ್ಕಳ ತಾಯಿಂದಿರು ಉಪಸ್ಥಿತರಿದ್ದರು

