ಸಿಂಧನೂರು : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರೈಚೂರ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಾಂಧಿನಗರ ಇವರ ಸಂಯುಕ್ತ ಆಶ್ರಯದಲ್ಲಿ ಅರಳಳ್ಳಿ ಆಯುಷ್ಮಾನ್ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ 3ನೇ ಮೈಲಿ ಕ್ಯಾಂಪನ ಅಂಗನವಾಡಿ ಕೇಂದ್ರದಲ್ಲಿ ಸಾರ್ವತ್ರಿಕ ಮಕ್ಕಳ ಲಸಿಕ ಸತ್ರದಲ್ಲಿ ತಾಯಂದಿರು ಹಾಗೂ ಗರ್ಭಿಣಿಯರನ್ನು ಕುರಿತು ಹಾಗೂ ಮಕ್ಕಳನ್ನು ಕುರಿತು ಲಸಿಕೆಯ ಮಹತ್ವ ಮಗುವಿನ ಒಂದು ವರ್ಷದೊಳಗೆ 12 ಮಾರಕ ರೋಗಗಳ ತಡೆಗೆ ಉಚಿತವಾಗಿ ಲಸಿಕೆ ಪಡೆದುಕೊಳ್ಳಲು ಪಾಲಕರಲ್ಲಿ ಮನವಿ ಮಾಡಲಾಯಿತು ಮಕ್ಕಳಲ್ಲಿ ಬಾಲ್ಯದಲ್ಲಿ ಕಂಡುಬರುವ ಮಾರಣಾಂತಿಕ ಕಾಯಿಲೆಗಳ ನಿಯಂತ್ರಣಕ್ಕೆ ಹುಟ್ಟಿದ ದಿನದಿಂದ ಒಂದು ವರ್ಷದೊಳಗೆ ಯಾವುದೇ ಮಾರಣಾಂತಿಕ ಕಾಯಿಲೆಗಳ ಬಾರದಂತೆ ಕಾಯಿಲೆಗಳ ನಿಯಂತ್ರಣಕ್ಕೆ ಉಚಿತವಾಗಿ ಲಸಿಕೆಯನ್ನು ಆರೋಗ್ಯ ಇಲಾಖೆಯ ಮೂಲಕ ಪಡೆದುಕೊಳ್ಳಲು ಪಾಲಕರಲ್ಲಿ ಮನವಿ ಮಾಡಲಾಯಿತು ಶ್ರೀ ಬಸಯ್ಯ ಉಪಜಿಲ್ಲಾ ಆರೋಗ್ಯ ಶಿಕ್ಷಣಧಿಕಾರಿಗಳು ರಾಯಚೂರು ಇವರು ತಾಯಂದಿರನ್ನು ಉದ್ದೇಶಿಸಿ ಮಾತನಾಡಿದರು, ನಂತರ ಶ್ರೀಮತಿ ಗೀತಾ ಹಿರೇಮಠ ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ ಮಾತನಾಡಿ ಗಂಭೀರ ಮತ್ತು ಮರಣಾಂತಿಕ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಲಸಿಕೆಯನ್ನು ಹಾಕಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ ಪೋಷಕರಿಗೆ ಲಭ್ಯವಿರುವ ಎಲ್ಲಾ ಮಾಹಿತಿಯೊಂದಿಗೆ ತಮ್ಮ ಮಕ್ಕಳಿಗೆ ಲಸಿಕೆ ಹಾಕುವ ನಿರ್ಧಾರವು ಕೆಲವೊಮ್ಮೆ ಕಷ್ಟಕರವೇನಿಸಬಹುದು ಅದ್ಯಾಗಿಯೂ ನಿಮ್ಮ ಮಗುವಿನ ಆರೋಗ್ಯ ಮತ್ತು ಸುರಕ್ಷತೆಗೆ ಲಸಿಕೆಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ ಈ ಬ್ಲಾಗ್ ಪೋಸ್ಟ್(blog post ಅಂದರೆ ಲೇಖನ, ಬರಹ, ವಿಡಿಯೋಗಳ ಮೂಲಕ ತಿಳಿಯುವುದು )ಮಕ್ಕಳಿಗೆ ಲಸಿಕೆಗಳು ಏಕೆ ಮುಖ್ಯ ತಡೆಗಟ್ಟುವ ರೋಗಗಳು ಮತ್ತು ವೈಯಕ್ತಿಕ ಮತ್ತು ಸಮುದಾಯದ ಆರೋಗ್ಯಕ್ಕೆ ತರುವ ಪ್ರಯೋಜನಗಳನ್ನು ಚರ್ಚಿಸುತ್ತದೆ. ಲಸಿಕೆಗಳು ಯಾವವು, ಮಕ್ಕಳಿಗೆ ಲಸಿಕೆ ಏಕೆ ಮುಖ್ಯ ಎಂದು ಹೆಳಲಾಯಿತು, ಇದೆ ಜನೆವರಿ ತಿಂಗಳಿನಿಂದ 19-01-2026 ರಿಂದ 31-01-2026 ವರೆಗೆ ಆರಂಭವಾದ ದಡಾರ ರುಬೆಲ್ಲಾ ನಿರ್ಮೂಲನ ಕಾರ್ಯಕ್ರಮದ ಲಸಿಕಾ ಅಭಿಯಾನ ಆರಂಭವಾಗಿದ್ದು MR 1,MR 2, ಎರಡು ಡೋಸ್ ಪಡೆದುಕೊಳ್ಳುವಂತೆ ತಾಯಂದಿರಿಗೆ ಹೇಳಲಾಯಿತು ರಕ್ತ ಹೀನತೆಯ ಕುರಿತು, ಗರ್ಭಿಣಿಯರಲ್ಲಿ ಮಕ್ಕಳಲ್ಲಿ ರಕ್ತಹೀನತೆ ಹೋಗಲಾಡಿಸಲು ಐರನ್ ಪಾಲಿಕ್ ಆಸಿಡ್ ಮಾತ್ರೆಗಳನ್ನು ಜೊತೆಗೆ ಐರನ್ ಸಿರಪ್ ತೆಗೆದುಕೊಳ್ಳಲು ಸೂಚಿಸಲಾಯಿತು ವೈಯಕ್ತಿಕ ಸ್ವಚ್ಛತೆಯ ಕುರಿತು ಹೆಚ್ಚಿನ ಗಮನವನ್ನು ಹಾರೈಸುವಂತೆ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿ ಹೇಳಲಾಯಿತು ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ಕುರಿತು ಮಾಹಿತಿ ನೀಡಲಾಯಿತು ಜ್ವರ ಶೀತ ಆಗದಂತೆ ನೋಡಿಕೊಳ್ಳುವುದು ಹಾಗೂ ಮಕ್ಕಳಲ್ಲಿ ಮಕ್ಕಳ ಬೆಳವಣಿಗೆ ಕುಂಠಿತವಾಗದಂತೆ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿ ತಿಳಿ ಹೇಳಲಾಯಿತು ಈ ಸಂದರ್ಭದಲ್ಲಿ ಶ್ರೀ ಅಯ್ಯನಗೌಡ CHO, ಶ್ರೀಮತಿ ಸಾವಿತ್ರಿ ಪಿ ಎಚ್ ಸಿ ಓ, ಅಂದಮ್ಮ ಆಶಾ ಕಾರ್ಯಕರ್ತೆ, ರಜಿನಿ, ವಿಜಯಲಷ್ಮಿ, ಅಕ್ಕಮಹಾದೇವಿ ಅಂಗವಾಡಿ ಕಾರ್ಯಕರ್ತೆಯರು, ಹಾಗೂ ತಾಯಂದಿರು, ಗರ್ಭಿಣಿಯರು ಸಾರ್ವಜನಿಕರು ಉಪಸ್ಥಿತರಿದ್ದರು.

