ನಗರದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಸಂಜೆ ದಲಿತ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಯುವ ಘಟಕದಿಂದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಹಾಗೂ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಕಾರಣರಾದ ಗಣ್ಯರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡು ಅಭಿನಂದಿಸಲಾಯಿತು.

ನಂತರ ತಾಲೂಕು ಘಟಕದ ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ಮಾತನಾಡಿ, ದಲಿತ ಸಾಹಿತ್ಯ ಪರಿಷತ್ತು 30 ವರ್ಷಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನೇಕ ಸಾಹಿತ್ಯ, ಸಾಂಸ್ಕೃತಿಕ, ಸಂವಾದ, ಚರ್ಚಾಗೋಷ್ಠಿಗಳ ಜೊತೆಗೆ ಜಿಲ್ಲಾ, ತಾಲೂಕು ಮತ್ತು ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಾ ಬಂದಿದೆ. ಕಾರಣ ಜಿಲ್ಲೆಯ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಡಿಸೆಂಬರ್ 20 ಮತ್ತು 21ರಂದು ಎರಡು ದಿನಗಳ ಕಾಲ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು.

ಸಮ್ಮೇಳನದಲ್ಲಿ ಸಿಂಧನೂರು ತಾಲೂಕಿನಲ್ಲಿ ಅನೇಕ ಪ್ರಗತಿಪರರು, ಬುದ್ದಿಜೀವಿಗಳು, ವಿವಿಧ ಮುಖಂಡರು, ಸಮ್ಮೇಳನದ ಯಶಸ್ವಿಗೆ ಕಾರಣರಾಗಿದ್ದರು. ಅಲ್ಲದೇ ಹಲವಾರು ಜನರು ಸಮ್ಮೇಳನದಲ್ಲಿ ಗೋಷ್ಠಿ ಮತ್ತು ಇತರೆ ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದರು. ಈ ಎಲ್ಲಾ ಸಂಗತಿಗಳನ್ನು ಗಮನಿಸಿ ಮಹನೀಯರಿಗೆ ಸನ್ಮಾನಿಸಲಾಗಿದೆ ಎಂದರು.

ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಬಸವರಾಜ ಪಿ.ನಾಯಕ ಮಾತನಾಡಿ, ದಲಿತ ಸಾಹಿತ್ಯ ಪರಿಷತ್ತಿನ ವಾರ್ಷಿಕ ಚಟುವಟಿಕೆಗಳನ್ನು ವಿವರಿಸುವುದರ ಜೊತೆಗೆ ತಾಲೂಕು ಘಟಕಕ್ಕೆ ನೂತನವಾಗಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದಿಸುವುದು ನಮ್ಮ ಪರಿಷತ್ತಿನ ಜವಾಬ್ದಾರಿಯಾಗಿತ್ತು. ಈ ನಿಟ್ಟಿನಲ್ಲಿ ಅವರನ್ನು ಅಭಿನಂದಿಸಿಲಾಯಿತು ಎಂದರು.

ಪ್ರಧಾನ ಕಾರ್ಯದರ್ಶಿ ರಾಮಣ್ಣ ಹಿರೇಬೇರ್ಗಿ, ಖಜಾಂಚಿ ಶರಣಪ್ಪ ಹೊಸಳ್ಳಿ, ಹಿರಿಯ ಉಪಾಧ್ಯಕ್ಷ ಹೆಚ್.ಎಫ್.ಮಸ್ಕಿ, ಡಾ.ಅರುಣಕುಮಾರ ಭೇರ್ಗಿ, ಡಾ.ಮದಗಪ್ಪ ಭಂಡಾರಿ, ಆಂಜನೇಯ ರಾಮತ್ನಾಳ್, ಶರೀಫ್ ಹಸಮಕಲ್, ಪತ್ರಕರ್ತರಾದ ನಾಗರಾಜ ಬೊಮ್ಮನಾಳ,  ಹನುಮಂತ, ವೀರೇಶ ಕನ್ನಾರಿ, ಡಾ.ಕೆ.ಖಾದರ್ ಭಾಷಾ, ಡಾ.ವೆಂಕಟನಾರಾಯಣ, ಮಂಜುನಾಥ ಸೋಮಲಾಪುರ, ನಿವೃತ್ತ  ಪ್ರಾಂಶುಪಾಲ ಶಿವಯ್ಯ ಹಿರೇಮಠ, ಆಪ್ತಮಿತ್ರ ಸಹಕಾರಿಯ ಸಿಇಓ ಬಸವರಾಜ ಬಿರಾದಾರ್, ನೊಬೆಲ್ ಕಾಲೇಜಿನ ಅಧ್ಯಕ್ಷ ಪರಶುರಾಮ ಮಲ್ಲಾಪುರ, ಈಶ್ವರ ಹಲಗಿ, ಮೆಹಬೂಬ್ ರೌಡಕುಂದ, ನೂರ್ ಮಹಮ್ಮದ್, ಬಿ.ರವಿಕುಮಾರ ಸಾಸಲಮರಿ, ವೆಂಕಟೇಶ ಬುಕ್ಕನಟ್ಟಿ, ಶಿವರಾಜ ಅಡಗಲ್, ಕಾಳಿಂಗಪ್ಪ ಆಯನೂರು, ರಾಮಣ್ಣ ರೈತನನಗರ ಕ್ಯಾಂಪ್, ಮುರಾರ್ಜಿ ಶಾಲಾ ಪ್ರಾಚಾರ್ಯರು, ಬಸವರಾಜ ಎಲ್ ಚಿಗರಿ, ಜಮಾಅತೆ ಇಸ್ಲಾಂ ತಾಲೂಕು ಅಧ್ಯಕ್ಷ ಹುಸೇನ್ ಸಾಬ್, ಹೊನ್ನೂರ ಕಟ್ಟಿಮನಿ, ದ್ಯಾಮಣ್ಣ ಚಿಕ್ಕಭೇರ್ಗಿ, ಸೇರಿದಂತೆ ಅನೇಕರಿದ್ದರು. ಈ ಕಾರ್ಯಕ್ರಮವನ್ನುಬಯುವ ಘಟಕದ ಅಧ್ಯಕ್ಷ ತಿಮ್ಮಪ್ಪ ಕಲ್ಮಂಗಿ ಸ್ವಾಗತಿಸಿದರು. ದುರಗಪ್ಪ ಗುಡದೂರು ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *