ರಾಯಚೂರು:- ಸಿಂಧನೂರು ತಾಲೂಕು ಅತೀ ಸಣ್ಣಗ್ರಾಮ ವಾದ ತಿಪ್ಪನಟ್ಟಿ ಗ್ರಾಮದ ಯುವ ಕಾಂಗ್ರೆಸ್ ಮುಖಂಡನಾದ ಹುಸೇನ್ ಬಾಷಾ ತಿಪ್ಪನಹಟ್ಟಿ ರಾಯಚೂರು ಜಿಲ್ಲಾ ಸಾಮಾಜಿಕಜಾಲತಾಣ ಸಂಯೋಜಕರಾಗಿ ನೇಮಕವಾಗಿದ್ದು, ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ನಿರಂತರ ಕಾರ್ಯನಿರ್ವಾಹಿಸುವ ಹುಸೇನ್ ಬಾಷಾ ಗೆ ರಾಯಚೂರು ಜಿಲ್ಲಾ ಸಾಮಾಜಿಕ ಜಾಲತಾಣ ರಾಷ್ಟ್ರೀಯ ಅಧ್ಯಕ್ಷರಾದ ಮನು ಜೈನ್ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಯುವ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ನೂತನ ಪದಾಧಿಕಾರಿಗಳಾಗಿ ನೇಮಕಗೊಂಡಿರುವ ಎಲ್ಲಾ ಯುವ ಕಾಂಗ್ರೆಸ್ ನೇತಾರರಿಗೆ ಅಭಿನಂದನೆಗಳು.


