ಆಕಸ್ಮಿಕ ಘಟನೆಗಳಿಂದ ಹೆಚ್‌ಐವಿ ಸೊಂಕಿತರಿಗೆ ಸಮುದಾಯದಲ್ಲಿ ಕಳಂಕ ತಾರತಮ್ಯವನ್ನು ಹೊಗಲಾಡಿಸುವ ಜೊತೆಜೊತೆಗೆ ವಿವಿಧ ಇಲಾಖೆಗಳ ಮೂಲಕ ಸಿಗುವ ಸೌಲಭ್ಯಗಳ ಒದಗಿಸುವಿಕೆಗೆ ಹೆಚ್ಚಿನ ಆಧ್ಯತೆ ನೀಡುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಹೆಚ್‌ಐವಿ ತಡೆಗೆ ಯುವ ಸಮುದಾಯಕ್ಕೆ ಸೋಂಕಿನಿಂದ ಉಂಟಾಗುವ ವೈಯಕ್ತಿಕ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹೆಚ್ಚಿನ ಜಾಗೃತಿ ನೀಡಲು ಮತ್ತು ಈಗಿರುವ ಸೋಂಕಿತರಿಗೆ ಎಆರ್‌ಟಿ ಚಿಕಿತ್ಸೆ ವಿಳಂಬವಾಗದಂತೆ, ಅಗತ್ಯವುಳ್ಳವರಿಗೆ ನೆವರೋಪಿನ್ ಚಿಕಿತ್ಸೆ, ಇದರೊಂದಿಗೆ ಲಿಂಗತ್ವ ಅಲ್ಪಸಂಖ್ಯಾತರ, ಲೈಂಗಿಕ ಕಾರ್ಯಕರ್ತರ ಮಾಹಿತಿಯನ್ನು ವೈದ್ಯಕೀಯ ಕಾರಣ ಹೊರತುಪಡಿಸಿ ಗೌಪ್ಯವಾಗಿ ಇಡುವ ಮೂಲಕ ಅವರಿಗೆ ವಸತಿ ಯೋಜನೆಯಡಿ ಮನೆಗಳು, ಸಾಲ ಒದಗಿಸುವಿಕೆ, ಮನಸ್ವಿನಿ, ಮೈತ್ರಿ ಯೋಜನೆಯಡಿ ಮಾಶಾಸನ, ಉದ್ಯೋಗಿನಿ ಯೋಜನೆಯಡಿ ಸ್ವಯಂ ಉದ್ಯೋಗದ ಅರ್ಜಿಗಳನ್ನು ಆಧ್ಯತೆ ನೀಡಿ ಸೌಲಭ್ಯ ಒದಗಿಸಿ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುವಂತೆ ಸೂಚಿಸಿದರು.
ವಿರಳ ರಕ್ತದ ಗುಂಪುಗಳನ್ನು ಖಾಯ್ದಿರಿಸಲು ಸೂಚನೆ
ಗರ್ಭಿಣಿ, ಬಾಣಂತಿಯರಿಗೆ ತುರ್ತು ಅಗತ್ಯತೆ ಹಿನ್ನಲೆಯಲ್ಲಿ ಸರಕಾರಿ ಮತ್ತು ಖಾಸಗಿ ಬ್ಲಡ್ ಬ್ಯಾಂಕ್‌ಗಳಲ್ಲಿ ನೆಗೆಟಿವ್ ಹಾಗೂ ವಿರಳ ಗುಂಪಿನ ರಕ್ತವನ್ನು ಕನಿಷ್ಠ ಒಂದು ಯುನಿಟ್ ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಿದರು.
ನಿಯಮಿತ ರಕ್ತದಾನ ಶಿಬಿರಗಳ ಆಯೋಜನೆಗೆ ಸೂಚನೆ:
ಅಲ್ಲದೆ ನಿಯಮಿತವಾಗಿ ರಕ್ತದಾನ ಶಿಬಿರಗಳನ್ನು ಸಂಘ ಸಂಸ್ಥೆ, ಪದವಿ ಕಾಲೇಜು, ಉತ್ಸವ, ಜಾತ್ರೆಗಳಲ್ಲಿ ಆಯೋಜಿಸಿ ರಕ್ತದ ಕೊರತೆ ಜಿಲ್ಲೆಯಲ್ಲಿ ಉಂಟಾಗದಂತೆ ನಿಗಾವಹಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸುರೇಂದ್ರಬಾಬು,
ಜಿಲ್ಲಾ ಶಸ್ತ್ರಚಿಕಿತ್ಸಕರು ರಿಮ್ಸ್ ಆಸ್ಪತ್ರೆ ಡಾ ವಿಜಯಶಂಕರ್, ಉಪನಿರ್ದೇಶಕರು ಡಬ್ಲ್ಯುಸಿಡಿ ಇಲಾಖೆ ನವೀನ್‌ಕುಮಾರ್, ಡಿಡಿಪಿಐ ಕೆ.ಡಿ ಬಡಿಗೇರ, ಡಾ ಮಹ್ಮದ್ ಶಾಕೀರ್ ಮೊಹಿಯುದ್ದೀನ್ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ, ಡಾ ನಂದಿತಾ ಎಮ್ ಎನ್ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ, ಡಾ ಗಣೇಶ್ ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿ, ಡಾ ಚಂದ್ರಶೇಖರಯ್ಯ ಡಿಪಿಡಿಓ, ಡಾ ಶಿವಕುಮಾರ್ ಜಿಲ್ಲಾ ಎನ್‌ಪೋರ್ಸ್‌ಮೆಂಟ್ ಅಧಿಕಾರಿ, ಕೇಂದ್ರ ಕಾರಗೃಹದ ಅಧಿಕ್ಷಕರಾದ ಅನೀತಾ ಎಸ್ ಹಿರೇಮನಿ, ಡಿ.ಪಿ.ಸಿ.ಓ ಅಮರೇಶ, ಆಹಾರ ಇಲಾಖೆಯ ಶಿವಮೂರ್ತಿ, ವಿವಿಧ ಬ್ಲಡ್‌ಬ್ಯಾಂಕ್ ವೈದ್ಯರಾದ ಡಾ ಇಂದ್ರಾಣಿ ಕೆ, ಡಾ ಪ್ರಸನ್ನ, ಡಾ ಸಂದೀಪ್ ಕುಮಾರ್, ರಘುವರ್ಮಾ, ಡಿಯುಡಿಸಿ ಹಂಪಣ್ಣ, ಕಾರ್ಮಿಕ ಅಧಿಕಾರಿ ಆರತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡ್ಯಾಪ್ಕೋ ಮೇಲ್ವಿಚಾರಕ ಮಲ್ಲಯ್ಯ ಮಠಪತಿ, ಡಿವೈಹೆಚ್‌ಇಓ ಬಸಯ್ಯ, ಹೆಚ್‌ಐಓ ದೊಡ್ಡಮನಿ ಬಿಬಿ, ಎಲ್‌ಟಿಓ ಸಾಯಿರಾಬಾನು, ಮೃತ್ಯುಂಜಯ, ಎಪಡಮಲಾಜಿಷ್ಟ್ ಶ್ರೀನಿವಾಸ್, ಶಾಂತಕುಮಾರ್, ಹೊಸಬೆಳಕು ಸಂಸ್ಥೆಯ ಈರಣ್ಣ, ನಾಯಕ್, ಜ್ಞಾನಕುಮಾರಿ, ನಾಗರಾಜ ರತಕಲ್ಲ, ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

