ಮಸ್ಕಿ ತಾಲೂಕಿನ ಹಾಲಾಪೂರದ ಸರಕಾರಿ ಪ್ರೌಢಶಾಲೆಯ ದತ್ತಿ ದಾನಿಗಳಾದ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಇವರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳಾದ ಟೀ ಶರ್ಟ್ ಮತ್ತು ಲೋಯರ್ ವಿತರಣೆ ಮಾಡಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಕಲಿಕಾಮಟ್ಟವನ್ನು ಸುಧಾರಿಸಿಕೊಳ್ಳಬೇಕು, ಇದು ಸ್ಪರ್ಧಾ ಪ್ರಪಂಚ ಶಿಕ್ಷಕರು ಹೇಳುವ ಪಾಠವನ್ನ ಸರಿಯಾಗಿ ಆಲಿಸಬೇಕು, ಮನೆಯಲ್ಲಿ ಯಾವುದೇ ಟಿವಿ ಮೊಬೈಲ್ ಇವುಗಳಿಂದ ದೂರವಿದ್ದು ಅತ್ಯುತ್ತಮ ಅಭ್ಯಾಸ ಮಾಡಿ ಎಸ್ ಎಸ್ ಎಲ್ ಸಿ ತಮ್ಮ ಜೀವನಕ್ಕೆ ಮಹತ್ವದ ಘಟ್ಟ ಹೀಗಾಗಿ ಒಳ್ಳೆಯ ಫಲಿತಾಂಶ ತೆಗೆದುಕೊಳ್ಳಬೇಕು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600 ಕ್ಕೂ ಹೆಚ್ಚು ಅಂಕಗಳಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪಿಯುಸಿ ವಿಜ್ಞಾನ ವಿಭಾಗದ ಪ್ರವೇಶಾತಿ ಕೊಡಿಸಿ, ಕಾಲೇಜಿನ ಎಲ್ಲಾ ಶುಲ್ಕವನ್ನು ನಾನೇ ಬರಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯ ಬಸಪ್ಪ ಜಂಗಮರಳ್ಳಿ, ಬಸವರಾಜಗೌಡ ಎಮ್ಮಿಗನೂರು, ಸಿದ್ದಾರ್ಥ ಪೊ. ಪಾಟೀಲ್ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ , ಯಂಕಪ್ಪ ಮಡಿವಾಳ ಎಸ್ ಡಿ ಎಂ ಸಿ ಸದಸ್ಯ, ಶಾಲಾ ಮುಖ್ಯಗುರು ಸುಭಾಷ್ ಸಿಂಗ್ ಹಜಾರೆ ಹಾಗೂ ಶಿಕ್ಷಕ ವೃಂದ ಇದ್ದರು.

