ಮಾನ್ವಿ: ತಾಲೂಕಿನ ಉಟಕನೂರು ಗ್ರಾಮದಲ್ಲಿನ ಗ್ರಾಮ ಪಂಚಾಯಿತಿಗೆ ಜಿ.ಪಂ. ಸಿ.ಇ,ಓ. ಈಶ್ವರ ಕುಮಾರ ಕಾಂದೂ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ ಸರ್ಕಾರವು ಉಟಕನೂರು ಗ್ರಾಮದ ಸಮಗ್ರವಾದ ಅಭಿವೃದ್ದಿಗಾಗಿ ಉಟಕನೂರು ಗ್ರಾಮ ಪಂಚಾಯಿತಿಯನ್ನು ಕಾಯಕ ಗ್ರಾಮವೆಂದು ಆಯ್ಕೆಮಾಡಿದೆ ಈ ಯೋಜನೆಯಡಿಯಲ್ಲಿ ಗಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲಿಕರಣಕ್ಕೆ ಹೆಚ್ಚಿನ ಅದ್ಯತೆಯನ್ನು ನೀಡಬೇಕು. ಗ್ರಾಮ ಪಂಚಾಯತಿಯಲ್ಲಿ 28 ದಾಖಲಾತಿಗಳನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು. ಗ್ರಾ.ಪಂ.ಆವರಣದಲ್ಲಿರುವ ಗ್ರಂಥಾಲಯವನ್ನು ಗ್ರಾಮದ ಜನರಿಗೆ ಅಧ್ಯಾಯನ ನಡೆಸುವುದಕ್ಕೆ ಸೂಕ್ತವಾದ ಸ್ಥಳವನ್ನು ಗುರುತಿಸಿ ಸ್ಥಳಾಂತರ ಗೊಳಿಸಬೇಕು. ಗ್ರಾಮದಲ್ಲಿನ ಮನೆಗಳಿಗೆ ಕುಡಿಯುವ ನೀರಿನ ಶುಲ್ಕ ಮತ್ತು ತೆರಿಗೆ ವಸೂಲಾತಿ ಬಾಕಿ ಇದ್ದು ಪ್ರಸ್ತುತ ಆರ್ಥಿಕ ವರ್ಷದ ವಸೂಲಾತಿಯ ಒಟ್ಟು ಬೇಡಿಕೆ ಮಾರ್ಚ್ -2026 ಅಂತ್ಯದೊಳಗಾಗಿ ವಸೂಲಾತಿ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಾಗಭೂಷಣ ಕಾಂಬ್ಳೆ ರವರಿಗೆ ಸೂಚಿಸಿದರು.
ಗ್ರಾಮಪಂಚಾಯಿತಿಗಳಲ್ಲಿನ ಕಡತಗಳನ್ನು ಪರಿಶೀಲಿಸಿ ಗ್ರಾಮ ಪಂಚಾಯಿತಿ ಕಡತಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ತಾ.ಪಂ. ಪಂಚಾಯಿತಿ ರಾಜ ತಾ,ಸಹಾಯಕ ನಿರ್ದೇಶಕರಾದ ದೀಪಾ ಅರಳಿ ಕಟ್ಟಿ, ನರೇಗಾ ತಾ,ಸಹಾಯಕ ನಿರ್ದೇಶಕರಾದ ಖಾಲೀದ್ ಅಹ್ಮದ್ ರವರಿಗೆ ಸೂಚಿಸಿದರು
ತಾ.ಪಂ. ಇ.ಓ. ಪುರುರಾಜ್ ಸಿಂಗ್ ಸೋಲಂಕಿ ಐ.ಎ.ಎಸ್, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಿಬ್ಬಂದಿಗಳು,ಸದಸ್ಯರು ಇದ್ದರು.
ಮಾನ್ವಿ: ತಾಲೂಕಿನ ಉಟಕನೂರು ಗ್ರಾಮದಲ್ಲಿನ ಗ್ರಾಮ ಪಂಚಾಯಿತಿಗೆ ಜಿ.ಪಂ. ಸಿ.ಇ,ಓ. ಈಶ್ವರ ಕುಮಾರ ಕಾಂದೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
