ಮಾನ್ವಿ: ಪಟ್ಟಣದ ಶ್ರೀ ಸತ್ಯಸಾಯಿ ಗಾರ್ಡನ್‌ನಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಪ.ಜಾ. ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರಿ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ವತಿಯಿಂದ ನಡೆದ ಅಲೆಮಾರಿಗಳ ಬೃಹತ್ ಸಾಂಸ್ಕೃತಿಕ ಕಲಾ ಪ್ರದರ್ಶನ ಮತ್ತು ಸ್ವಾಭಿಮಾನ ಸಮಾವೇಶವನ್ನು ರಾಜ್ಯ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಪ.ಜಾತಿ,ಪ.ಪಂಗಡ ಸಮುದಾಯಗಳ ಅಭಿವೃದ್ದಿಗಾಗಿ ಶೇ.17 ರಷ್ಟು ಒಳಮೀಸಲಾತಿಯನ್ನು ಕಲ್ಪಿಸುವ ಮೂಲಕ ಮೀಸಲಾತಿಯನ್ನು ಹೆಚ್ಚಾಳ ಮಾಡಿರುವುದು ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳು ಮಾತ್ರ ದೇಶದ ಉಳಿದ ರಾಜ್ಯಗಳಲ್ಲಿ ಇನ್ನು ಕೂಡ ಮೀಸಲಾತಿ ಹೆಚ್ಚಾಳ ಮಾಡಿಲ್ಲ ಮೀಸಲಾತಿ ಹೆಚ್ಚಳ ಮಾಡುವ ಸಮಯದಲ್ಲಿ ಸಮಾಜದಲ್ಲಿನ ಅತ್ಯಂತ ಸೂಕ್ಷ್ಮ ಮತ್ತು ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಅಲೆಮಾರಿ ಸಮುದಾಯಗಳಿಗೆ ಮಿಸಲಾತಿಯ ಹಂಚಿಕೆಯಲ್ಲಿ ಲೋಪದೋಷಗಳಾಗಿರುವುದು ನಮ್ಮ ರಾಜ್ಯ ಸರ್ಕಾರಕ್ಕೆ ಕಂಡುಬಂದಿರುವದರಿಂದ 2 ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು ಮುಂದಿನ ಒಂದು ತಿಂಗಳಲ್ಲಿ ನಡೆಯುವ 3 ನೇ ಸಚಿವ ಸಂಪುಟದಲ್ಲಿ ಅಲೇಮಾರಿ ಸಮುದಾಯಗಳಿಗೆ ಮೀಸಲಾತಿ ಹಂಚಿಕೆ ಮಾಡುವುದಕ್ಕೆ ಮುಖ್ಯಮಂತ್ರಿಗಳು ನಿರ್ಣಯ ಅಂಗಿಕರಿಸುವ ಮೂಲಲ ಸಂತೋಷದ ಸುದ್ದಿಯನ್ನು ನೀಡಲಿದ್ದಾರೆ ಅಲ್ಲಿಯವರೆಗೂ ಅಲೇಮಾರಿ ಸಮುದಾಯದವರು ತಾಳ್ಮೆಯನ್ನು ವಹಿಸಿ ವದಂತಿಗಳಿಗೆ ಕಿಗೋಡಬೇಡಿ ಸಮುದಾಯಗಳು ಸಂಘಟಿತವದಾಗ ಮಾತ್ರ ಹೋರಾಟ ಮಾಡಿ ಸರ್ಕಾರದಿಂದ ದೊರೆಯುವ ತಮ್ಮ ನ್ಯಾಯುತವಾದ ಹಕ್ಕುಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ರಾಜ್ಯದಲ್ಲಿ ಅಲೆಮಾರಿ ಪ.ಜಾ. ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರಿ ಸಮುದಾಯಗಳು ರಾಜಕೀಯವಾಗಿ,ಆರ್ಥಿಕವಾಗಿ,ಸಮಾಜಿಕವಾಗಿ,ಅತ್ಯಂತ ಹಿಂದುಳಿದಿರುವ ರಾಜ್ಯದ ಇನ್ನೂ ಎರಡು ಸಮುದಾಯಗಳಿಗೆ ಮುಂದಿನ ದಿನಗಳಲ್ಲಿ ಅಭಿವೃದ್ದಿ ನಿಗಮಗಳನ್ನು ಸ್ಥಾಪನೆ ಮಾಡಲಾಗುವುದು. ರಾಯಚೂರು ನಗರ ಹಾಗೂ ಮಾನ್ವಿ ಪಟ್ಟಣದಲ್ಲಿ ಅಲೆಮಾರಿ ಸಾಂಸ್ಕೃತಿಕ ಭವನ ನಿರ್ಮಾಣ, ಅಲೆಮಾರಿ ಗ್ರಂಥಾಲಯಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳಲಾಗುವುದು ನಿಮ್ಮ ಬೇಡಿಕೆಗಳನ್ನು ಹಂತ,ಹAತವಾಗಿ ಈಡೆರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಅಲೆಮಾರಿ ಪ.ಜಾ. ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರಿ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ರಾಜ್ಯಾಧ್ಯಕ್ಷರಾದ ಡಾ.ವಿ.ಚಲಪತಿ ಮಾತನಾಡಿ ಈ ದೇಶದ ಮೂಲ ನಿವಾಸಿಗಳಾಗಿ ಸದಾ ಅಲೆಮಾರಿಗಳಾಗಿ ಊರ ಹೋರಗಿನ ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವ ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರಿ ಅಲೇಮಾರಿ ಸಮುದಾಯಗಳು ಸದಾ ಹರಿನಾಮ ಸ್ಮರಣೆ ಮಾಡುತ್ತ ಜೀವನಕ್ಕಾಗಿ ಅಲೆಯುತ್ತ ಭೀಕ್ಷಾಟನೆ ಮಾಡುವ ಸಮುದಾಯ ರಾಜಕೀಯವಾಗಿ,ಸಾಮಾಜಿಕವಾಗಿ,ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದರು ಕೂಡ ಒಳ ಮೀಸಲಾತಿಯಲ್ಲಿ ಶೇ1 ರ ವಿಶೇಷ ಸ್ಥಾನ ಮಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಸರ್ವೋಚ್ಚ ನ್ಯಾಯಾಲಯದ ಅದೇಶದ ನಂತರವು ನೀಡದೆ ಸಮುದಾಯವನ್ನು ಮೀಸಲಾತಿಯ ಸೌಲಾಭ್ಯಗಳಿಂದ ವಂಚಿಸುತ್ತಿದೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಯೋಗವು ನೀಡಿರುವ ಒಳಮೀಸಲಾತಿ ವರದಿಯಂತೆ ನಮ್ಮ ಸಮುದಾಯದವರಿಗೆ ನ್ಯಾಯ ಒದಗಿಸಬೇಕು.ರಾಜ್ಯ ಸರ್ಕಾರವು ನಮ್ಮ ಸಮುದಾಯದ ಭೂರಹಿತ ಅಲೆಮಾರಿಗಳಿಗೆ ಭೂಮಿ,ವಸತಿ ನೀಡಬೇಕು, ಅಲೆಮಾರಿ ನಿಗಮ ಮಂಡಳಿ ರಚನೆ ಮಾಡಿ 5ನೂರು ಕೋಟಿ ಅನುದಾನ ನೀಡಬೇಕು, ಅಲೆಮಾರಿ ಸಮುದಾಯದವರ ಕಲೆಗಳ ಪ್ರದರ್ಶನಕ್ಕೆ ಸಾಂಸ್ಕೃತಿಕ ಭವನಗಳನ್ನು ನಿರ್ಮಾಣ ಮಾಡಿ ಮುಂದಿನ ಪೀಳಿಗೆಗೆ ನಮ್ಮ ಕಲೆಗಳ ಬಗ್ಗೆ ತರಬೇತಿ ನೀಡಬೇಕು,ಅಲೆಮಾರಿ ಸಮುದಾಯಗಳ ಕುಟುಂಬದಲ್ಲಿನ ಮಕ್ಕಳಿಗೆ ಜಿಲ್ಲಾ ಮಟ್ಟದ ವಸತಿ ನಿಲಯಗಳನ್ನು ಪ್ರಾರಂಭಿಸಬೇಕು,ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ ಹಾಗೂ ಸ್ಪರ್ಧತ್ಮಕ ಪರೀಕ್ಷೆಗಳಿಗೆ ನೀಡುವ ತರಬೇತಿಯಲ್ಲಿ ಮೀಸಲಾತಿ ಕಲ್ಪಿಸಬೇಕು, ಅಲೆಮಾರಿ ಗ್ರಂಥಾಲಯಗಳನ್ನು ವಿಸ್ತರಿಸಬೇಕು,ಅಲೆಮಾರಿ ಮಹಿಳೆಯರು ಸ್ವಾವಲಂಬಿ ಬದುಕಿಗಾಗಿ ಆರ್ಥಿಕ ನೆರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿಗೆ ಶಾಸಕ ಹಂಪಯ್ಯನಾಯಕ ಮಾಲಾರ್ಪಣೆ ಮಾಡಿ ಮಾತನಾಡಿದರು, ಕರ್ನಾಟಕ ರಾಜ್ಯ ಅಲೆಮಾರಿ ಪ.ಜಾ. ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರಿ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ವತಿಯಿಂದ ಸಚಿವ ಎನ್.ಎಸ್.ಬೋಸರಾಜು ರವರಿಗೆ ರಾಜ್ಯ ಕಾರ್ಯದರ್ಶಿ ಮಹಾದೇವಪ್ಪ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಮನವಿ ಪತ್ರವನ್ನು ನೀಡಿದರು.
ಅಲೆಮಾರಿ ಸಮುದಾಯದ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಅಲೆಮಾರಿ ಸಮುದಾಯದ ಕಲಾವಿದರಿಂದ ವಿವಿಧ ಕಲೆಗಳ ಪ್ರದರ್ಶನ ನಡೆಯಿತು.
ಕರ್ನಾಟಕ ಜನಪದ ವಿಶ್ವವಿದ್ಯಾಲಯ ಗುತ್ತಗುಡಿಯ ಸಂಶೋಧನಾಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ ವಿಶೇಷವಾದ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪ.ಜಾತಿ,ಪ.ಪಂಗಡ,ಅಲೆಮಾರಿ ಅಭಿವೃದ್ದಿ ನಿಗಮ ಬೆಂಗಳೂರಿನ ಅಧ್ಯಕ್ಷರಾದ ಜಿ.ಪಲ್ಲವಿ, ,ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ಗಂಗಾಧರನಾಯಕ,ರಾಜಾ ವೆಂಕಟಪ್ಪ ನಾಯಕ, ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಬೆಂಗಳೂರಿನ ಜಂಟಿ ಕಾರ್ಯದರ್ಶಿ ಆನಂದಕುಮಾರ್ ಏಕಲವ್ಯ,ಹಿರಿಯ ದಲಿತ ಪರ ಹೋರಾಟಗಾರಾದ ಅಂಬಣ್ಣ ಅರೋಲಿಕರ್, ಎಸ್,ಮಾರೆಪ್ಪ, ಬಾಲಸ್ವಾಮಿ ಕೋಡ್ಲಿ ,ನಯೋಪ್ರ ಅಧ್ಯಕ್ಷರಾದ ಅಬ್ದುಲ್ ಗಫೂರ್ ಸಾಬ್, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಬಿ.ಕೆ.ಅಂಬರೇಶಪ್ಪ, ರಾಜಾ ಸುಭಶ್ಚಂದ್ರನಾಯಕ, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಉಮೇಶ ಯಾಪಲಪರ್ವಿ , ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಮಾರೆಪ್ಪ,ಬಿ,ಕೆ.ದಾಸರ್,ಹೆಚ್.ಕೆ.ದಾಸರ್, ಗೀರಿ,ಹೇಮರಾಜ, ಇಬ್ರಾಹಿಂ ಖುರೇಶಿ,ರಾಮಕೃಷ್ಣ,ಎಸ್,ವೆಂಕೋಬ,ನಾಗರತ್ನಮ್ಮ, ಲತಾ,ಶಿವರಾಜ ಜಾನೆಕಲ್, ಬುಡ್ಗ ಜಂಗಮ ರಾಜ್ಯ ಸಂಚಾಲಕರಾದ ಮಹಾಂತೇಶ್ ಸಿಕಲ್, ಬಿ,ನಾಗಪ್ಪ ಬಾಯಿದೊಡ್ಡಿ, ಎಸ್.ವೆಂಕೋಬ, ಯಲ್ಲಪ್ಪ,ಬಸವರಾಜ, ಪ್ರದೀಪ್ ,ರಮೇಶ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಅಲೆಮಾರಿ ಸಮುದಾಯದವರು ಸಮಾವೇಶದಲ್ಲಿ ಭಾಗವಹಿಸಿದರು.

